ನೀವು ಸುಟ್ಟಿದ್ಧು ಕೇವಲ ಭಾವಚಿತ್ರವನಲ್ಲ, ಭಾರತ ಮಾತೆಯನ್ನ-ಕಾಂಗ್ರೆಸ್ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ. ಧಾರವಾಡ,ಆಗಸ್ಟ್,20,2022(..):ವಿಪಕ್ಷ ನಾಯಕ ಸಿದ‍್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸದಿದ್ದನ್ನ ಖಂಡಿಸಿ ನಿನ್ನೆ ಧಾರವಾಡದಲ್ಲಿ ನಡೆದ ಪ್ರತಿಭಟನೆ ವೇಳೆ ಸ್ವಾತಂತ್ರ ಹೋರಾಟಗಾರ ಸಾವರ್ಕರ್ ಚಿತ್ರ ಸುಟ್ಟು ಹಾಕಿದ ಕಾಂಗ್ರೆಸ್ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಧಾರವಾಡದಲ್ಲಿ ಈ ಕುರಿತು ಮಾತನಾಡಿದ ಪ್ರಮೋದ್ ಮುತಾಲಿಕ್, ನೀವು ಭಾವಚಿತ್ರ ಸುಟ್ಟಿಲ್ಲ, ಭಾರತ ಮಾತೆ‌ ಸುಟ್ಟಿದ್ದೀರಿ. ಅವರು ತಮ್ಮ ಅರ್ಧ ಜೀವನ ಜೈಲಿನಲ್ಲಿ ಕಳೆದಂಥ ವ್ಯಕ್ತಿ. ನೀವು ಕ್ರಾಂತಿಕಾರಿಯ ಭಾವಚಿತ್ರ ಸುಟ್ಟಿದ್ದೀರಿ. ನಿಮಗೆ ದೇಶಭಕ್ತಿ ಇಲ್ಲ. ನಿಮಗೆ ಸಿದ್ದರಾಮಯ್ಯ ಬೇಕು. ನಿಮ್ಮ ಉದ್ದೇಶವಾದರೂ ಏನು ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ತಪ್ಪು. ಇದನ್ನು ಎಲ್ಲರೂ ಹೇಳುತ್ತಿದ್ದಾರೆ. ಇಂಥ ವ್ಯಕ್ತಿಯನ್ನ ಅಪಮಾನ ಮಾಡಿದ್ದು‌ ಸರಿಯಲ್ಲ. ಎಲ್ಲರೂ ಕ್ಷಮೆ ಕೇಳಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ರಂಭಾಪುರಿ ಪೀಠಕ್ಕೆ ಭೇಟಿ ವಿಚಾರ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಲ್ಲ ಕಡೆ ಅಡ್ಡ ನಮಸ್ಕಾರ ಮಾಡುತ್ತಾರೆ. ಇದೆಲ್ಲಾ ಮತಗಳ ದಾಹಕ್ಕಾಗಿ ನಡೆಯುತ್ತಿರುವ ನಾಟಕ. ನಿಮ್ಮ ನಾಟಕ ಬೇಡ, 60 ವರ್ಷದಲ್ಲಿ ನಿಮ್ಮ ಬಣ್ಣ ಬಯಲಾಗಿದೆ. ಹಣೆಗೆ ಕುಂಕುಮ ಹಚ್ಚಿದರೆ ಸಿದ್ದರಾಮಯ್ಯ ಉರಿದು ಬೀಳ್ತಾರೆ. ನಿಮ್ಮ ಬೂಟಾಟಿಕೆ ಮಾತು ಎಲ್ಲ ಸ್ವಾಮೀಜಿಗಳಿಗೂ ಗೊತ್ತು. ಸಿದ್ದರಾಮಯ್ಯ ನಾಸ್ತಿಕ ಎಂದು ಹರಿಹಾಯ್ದರು. : --- – -.