ಆರ್ ಎಸ್ ಎಸ್ ಮೊದಲ ಭಯೋತ್ಪಾದಕ ಸಾವರ್ಕರ್: ಮೊಟ್ಟೆ ಎಸೆತ ಘಟನೆ ಖಂಡಿಸಿ ಬಿ.ಕೆ ಹರಿಪ್ರಸಾದ್ ಆಕ್ರೋಶ. ಬೆಂಗಳೂರು,ಆಗಸ್ಟ್,19,2022(..):ನಿನ್ನೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆಯನ್ನ ಖಂಡಿಸಿರುವ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆರ್.ಎಸ್.ಎಸ್ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಬಿ.ಕೆ ಹರಿಪ್ರಸಾದ್, ಸಿದ‍್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಖಂಡನೀಯ. ಜ್ಞಾನವಿಲ್ಲದ ಗೃಹಮಂತ್ರಿ ಅರಗ ಜ್ಞಾನೇಂದ್ರ. ಆರ್ ಎಸ್ ಎಸ್ ಮತ್ತು ಬಿಜೆಪಿಯವರು ಕದ್ದು ಮೊಟ್ಟೆ ತಿಂತಾರೆ. ಸಂಘಪರಿವಾರದವರು ಕದ್ದು ಮಾಂಸ ತಿಂತಾರೆ . ಕೊಡಗಿನ ಜನರು ಏನೇ ಇದ್ದರೂ ನೇರವಾಗೆ ಮಾಡುತ್ತಾರೆ. . ಈ ರೀತಿ ಮೊಟ್ಟೆ ಎಸೆದು ಓಡಿಹೋಲ್ಲ ಎಂದರು. ಜಗತ್ತಿನ ಮೊದಲ ಭಯೋತ್ಪಾದಕ ನಾಥೂರಾಮ್ ಗೂಡ್ಸೆ. ಆರ್ ಎಸ್ ಎಸ್ ಮೊದಲ ಭಯೋತ್ಪಾದಕ ಸಾವರ್ಕರ್. ಸಿಎಂ ಬೊಮ್ಮಾಯಿ ಆರ್ ಎಸ್ಎಸ್ ನ ಕೈಗೊಂಬೆಯಾಗಿದ್ದಾರೆ. ಸಾವರ್ಕರ್ ಬಗ್ಗೆ ಸಿದ‍್ಧರಾಮಯ್ಯ ಹೇಳಿದ್ದು ತಪ್ಪಲ್ಲ.. ಸಾವರ್ಕರ್ ನಾಥೂರಾಮ್ ಗೂಡ್ಸೆ ಫೋಟೊಗೆ ಕಿಮ್ಮತ್ತಿಲ್ಲ ಕಸದ ತೊಟ್ಟಿ ಮೇಲೆ ಫೋಟೊ ಹಾಕಲು ಯೋಗ್ಯರಲ್ಲ ಎಂದು ಬಿ.ಕೆ ಹರಿಪ್ರಸಾದ್ ಟೀಕಿಸಿದರು. : – - –- -