ಮಾಜಿ ಸಿಎಂ ಸಿದ‍್ಧರಾಮಯ್ಯರಿಂದ ನೆರ ಹಾನಿ ವೀಕ್ಷಣೆ : ಸಚಿವ ಎಸ್ .ಟಿ ಸೋಮಶೇಖರ್ ಟೀಕೆ. ಮೈಸೂರು ,ಆಗಸ್ಟ್,,18,2022(..)ಕೊಡಗಿನಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ನೆರೆ ಹಾನಿ ವೀಕ್ಷಣೆ ಮಾಡುತ್ತಿರುವ ಬಗ್ಗೆ ಸಚಿವ ಎಸ್.ಟಿ ಸೋಮಶೇಖರ್ ಟೀಕಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಎಸ್.ಟಿ ಸೋಮಶೇಖರ್, ಸಿದ್ಧರಾಮಯ್ಯಗೆ ಈಗ ಪುರುಸೊತ್ತಾಗಿದೆ. ಕಳೆದ 15 ದಿನಗಳಿಂದ ನೆರೆ ಹಾನಿ ವೀಕ್ಷಣೆಗೆ ಹೋಗಿರಲಿಲ್ಲ. ಸರ್ಕಾರಿ ಕಾರು ಸೇರಿದಂತೆ ಎಲ್ಲಾ ಸೌಲಭ್ಯಗಳಿದ್ದವು. ನೆರೆ ವೀಕ್ಷಣೆಗೆ ಮೊದಲು ಹೋಗಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕಿತ್ತು. ಆದರೆ ಪರಿಹಾರ ಕೊಟ್ಟ ಮೇಲೆ ಈಗ ಯಾಕೆ ಹೋಗ್ತಿದ್ದಾರೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಮುಸ್ಲಿಂ ಏರಿಯಾ ಬಗ್ಗೆ ಸಿದ್ಧರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಸಿದ್ಧರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಾತಿಗೆ ತೂಕ ಇತ್ತು. ಈಗ ಅವರು ಏನ್ ಮಾತಾಡ್ತಾರೋ ಅವರಿಗೆ ಅರ್ಥ ಆಗಲ್ಲ. ವಿವಾದಾತಯ್ಮಕ ಹೇಳಿಕೆ ನೀಡದಿರಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಹೇಳಿದರು. : ---- - - .