ಮತ್ತೆ ಎನ್ ಟಿ ಎಂ ಶಾಲೆಗಾಗಿ ಪ್ರತಿಭಟನೆ: ಸ್ಮಾರಕ ಜಾಗದಲ್ಲಿ ಶಾಲೆ ನಿರ್ಮಿಸುವಂತೆ ಆಗ್ರಹ. ಮೈಸೂರು,ಆಗಸ್ಟ್,16,2022(..):ಎನ್ ಟಿ ಎಂ ಶಾಲೆಗಾಗಿ ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ ಸಮಿತಿ ಮತ್ತೆ ಪ್ರತಿಭಟನೆಗಿಳಿದಿದ್ದು, ರಾಮಕೃಷ್ಣ ಆಶ್ರಮದವರು ಮಾತಿಗೆ ತಪ್ಪದೆ ಶಾಲೆ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿದೆ. ನಗರದ ಗನ್ ಹೌಸ್ ಬಳಿಯ ಕುವೆಂಪು ವೃತ್ತದ ಬಳಿ , ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿ ಎನ್ ಟಿ ಎಂ ಶಾಲೆ ನಿರ್ಮಾಣಕ್ಕೆ ಒತ್ತಾಯಿಸಿದರು. ಈಗ ನಿರ್ಮಾಣವಾಗುತ್ತಿರುವುದು ವಿವೇಕ ಸ್ಮಾರಕವಲ್ಲ ಕನ್ನಡ ಶಾಲೆಯ ಸಮಾಧಿ. ಹಿಂದಿನ ಮೌಖಿಕ ಒಪ್ಪಂದದಂತೆ ಸ್ಮಾರಕ ಜಾಗದಲ್ಲಿ ಶಾಲೆಯನ್ನು ನಿರ್ಮಿಸಬೇಕು. ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರ ನಿವಾಸದಲ್ಲಿ ನಡೆದ ಮಾತುಕತೆಯಂತೆ ಕನ್ನಡ ಶಾಲೆಯನ್ನ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ರಾಮಕೃಷ್ಣ ಆಶ್ರಮದವರು ಮಾತಿಗೆ ತಪ್ಪದಂತೆ ಶಾಲೆ ನಿರ್ಮಿಸಿ ಕೊಡುವ ಬಗ್ಗೆ ಪ್ರಕಟಿಸಲಿ ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಾರೆ. : - – - -