ಶಿವಮೊಗ್ಗ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ ಆರೋಪ: ಕೆ.ಎಸ್ ಈಶ್ವರಪ್ಪಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು. ಶಿವಮೊಗ್ಗ,ಆಗಸ್ಟ್,16,2022(..):ಶಿವಮೊಗ್ಗದಲ್ಲಿ ನಿನ್ನೆ ನಡೆದ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿಯವರಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳನ್ನ ಹೇಳಿ ಕಾಂಗ್ರೆಸ್ ಮೇಲೆ ಹಾಕುತ್ತಿದ್ದಾರೆ. ಮುಸ್ಲೀಂ ಏರಿಯಾದಲ್ಲಿ ಸಾವರ್ಕರ್ ಫೊಟೊ ಇತ್ತು. ಮುಸ್ಲೀಂ ಏರಿಯಾದಲ್ಲಿ ಯಾಕೆ ಸಾವರ್ಕರ್ ಫೋಟೊ ಹಾಕಬೇಕಿತ್ತು. ಟಿಪ್ಪು ಫೋಟೊ ಸಹ ಹಾಕಲು ಬಿಡಬೇಕಿತ್ತು. ಇವರು ಕಿತಾಪತಿ ಮಾಡೋಕೆ ಹೋದವರು. ಕೃತ್ಯವೆಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಿದ್ಧರಾಮಯ್ಯ ಆಗ್ರಹಿಸಿದರು. : – - - –- .