ಸಿಎಂ ಗಮನಕ್ಕೆ ಬಾರದೆ ಸೈಟ್ ವಾಪಸ್ ಗೆ ಪತ್ರ ಬರೆದಿದ್ದಾರಾ? ಸಿದ್ದರಾಮಯ್ಯ ವಿರುದ್ದ ಹೆಚ್.ಡಿಕೆ ವಾಗ್ದಾಳಿ ನವದೆಹಲಿ,ಅಕ್ಟೋಬರ್,1,2024 (..):14 ಸೈಟ್ ವಾಪಸ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ ವಾಗ್ದಾಳಿ ನಡೆಸಿದ್ದಾರೆ. ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ನನ್ನ ಗಮನಕ್ಕೆ ಬಾರದೆ ಪತ್ರ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸೈಟ್ ವಾಪಸ್ ಸುದ್ದಿ ಕೇಳಿ ಆಶ್ಚರ್ಯ ಅಂದಿದ್ದಾರೆ. ಹಾಗಾದರೇ ಸಿಎಂ ಸಿದ್ದರಾಮಯ್ಯ ಗಮನಕ್ಕೆ ಬಾರದೆ ಪತ್ರ ಬರೆದಿದ್ದಾರಾ ಸಿಎಂ ಸಿದ್ದರಾಮಯ್ಯ ಎಷ್ಟು ಸುಳ್ಳು ಹೇಳುತಿದ್ದಾರೆ ಅಂತಾ ಗೊತ್ತಾಗುತ್ತಿದೆ ನನ್ನನ್ನ ಹಿಟ್ ಅಂಡ್ ರನ್ ಅಂತಿದ್ರು, ಯುಟರ್ನ್ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದರು. ಇಷ್ಟು ತರಾತುರಿ ನಿರ್ಧಾರವನ್ನ ಹೇಳಿಕೊಟ್ಟಿದ್ದು ಯಾರು? ನನ್ನನ್ನ ಸುಳ್ಳುಗಾರ ಎನ್ನುತ್ತಿದ್ದರು ಈಗ ಅವರೇ ಸುಳ್ಳುಗಾರ ಆಗಿದ್ದಾರೆ ಎಂದು ಹೆಚ್.ಡಿಕೆ ಕಿಡಿಕಾರಿದರು. : , , , ,