ಆಗಸ್ಟ್ 28 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ – ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ಆಗಸ್ಟ್,13,2022(..):ಆಗಸ್ಟ್ 28 ರಂದು ದೊಡ್ಡಬಳ್ಳಾಪುರದಿಂದಲೇ ಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜನರ ಉತ್ಸಾಹ, ಒತ್ತಾಸೆ, ಒತ್ತಡ, ಸಚಿವರ ಅಪೇಕ್ಷೆ ಹಿನ್ನೆಲೆಯಲ್ಲಿ ಆಗಸ್ಟ್ 28 ರಂದು ದೊಡ್ಡಬಳ್ಳಾಪುರದಿಂದಲೇ ಜನೋತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ . ಸರ್ಕಾರದ ಮೂರು ವರ್ಷಗಳ ಸಾಧನೆ ಬಗ್ಗೆ ಉತ್ಸವದ ಮೂಲಕ ಸಂಭ್ರಮಿಸಲು ಜನರು ತಯಾರಾಗಿದ್ದಾರೆ ಎಂದು ತಿಳಿಸಿದರು. ಜನೋತ್ಸವ ಕಾರ್ಯಕ್ರಮದ ಕುರಿತು ಇಂದು ಕೇಂದ್ರ ನಾಯಕರ ಜೊತೆಗೆ ಚರ್ಚಿಸಿದ ಬಳಿಕ ಯಾರೆಲ್ಲ ಭಾಗವಹಿಸಲಿದ್ದಾರೆ ಎನ್ನುವುದು ತಿಳಿಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. : - -28th - .