ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಗೊತ್ತಿಲ್ಲ: ಟ್ವಿಟ್ ಮಾಡಿದವರನ್ನೇ ಕೇಳಿ- ಮಾಜಿ ಸಿಎಂ ಸಿದ್ಧರಾಮಯ್ಯ. ಹುಬ್ಬಳ್ಳಿ,ಆಗಸ್ಟ್,10,2022(..):ಯಡಿಯೂರಪ್ಪ ಬದಲಾವಣೆ ಬಗ್ಗೆ ನನಗೆ ಗೊತ್ತಿತ್ತು. ಹಾಗಾಗಿ ಬಿಎಸ್ ವೈ ಚೇಂಜ್ ಆಗ್ತಾರೆ ಅಂತಾ ಹೇಳಿದ್ದೆ. ಆದರೆ ಬೊಮ್ಮಾಯಿ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಟ್ವೀಟ್ ಮಾಡಿದವರನ್ನೇ ಕೇಳಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಮೂರನೇಯವರಾದ್ರು ಸಿಎಂ ಆಗಲಿ, ನಾಲ್ಕನೇಯವರಾದ್ರೂ ಸಿಎಂ ಆಗಲಿ. ಸಿಎಂ ಬದಲಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಟ್ವೀಟ್ ಮಾಡಿದವರನ್ನ ಹೋಗಿ ಕೇಳಿ, ನಾನಂತೂ ಟ್ವೀಟ್ ಮಾಡಿಲ್ಲ ಎಂದು ಹೇಳಿದರು. ಹರ್ ಘರ್ ತಿರಂಗಾ ಅಭಿಯಾನ ನಾಟಕ ಅಂತ ಹೇಳಿದ್ದೆ ಸಾವರ್ಕರ್ ತ್ರಿವರ್ಣ ಧ್ವಜ ವಿರೋಧಿಸಿದ್ರು ಎಂದಿದ್ದೆ. ಇದ್ದಿದ್ದನ್ನ ಇದ್ದಂಗೆ ಹೇಳಿದ್ರೆ ರಾಜಕೀಯನಾ..? ನಾಗಪುರ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸುತ್ತಾರಾ..? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು. : ’- - - –- .. ’ : – , 10, 2022 (..): “ . . ’ . ,” . , , . “ . , ,” .“ , . ? ?,” .: / / /