ಮಳೆ ಹಾನಿ ಪ್ರದೇಶಕ್ಕೆ ಕೃಷಿ ಸಚಿವ ಬಿಸಿ ಪಾಟೀಲ್ ಭೇಟಿ, ಪರಿಶೀಲನೆ. ಗದಗ,ಆಗಸ್ಟ್,9,2022(..):ಕೃಷಿ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ಇಂದು ಗದಗ ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ತಿಂಗಳ ಬಳಿಕ ಗದಗ ಜಿಲ್ಲೆಗೆ ಭೇಟಿ ನೀಡಿದ ಸಚಿವ ಬಿಸಿ ಪಾಟೀಲ್ , ಹೊಂಬಳ, ಹೆಚ್ ಎಸ್ ವೆಂಕಟಾಪುರ ಗ್ರಾಮ ಹಾಗೂ ಕೆಲವು ಕಡೆ ಮಳೆ ಹಾನಿ ಪ್ರದೇಶಕ್ಕೆ ಮಾತ್ರ ಭೇಟಿ ನೀಡಿ ಪರಿಶೀಲಿಸಿ ತೆರಳಿದರು. ಗದಗ – ಬೆಟಗೇರಿ ವ್ಯಾಪ್ತಿಯಲ್ಲಿ ಮಂಜುನಾಥ ಲೇಔಟ್ ಎಸ್. ಎಂ ಕೃಷ್ಣಾ ಬಡಾವಣೆಯಲ್ಲಿ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದ್ದು ಈ ಪ್ರದೇಶಗಳಲ್ಲಿ ಪರಿಶೀಲಿಸಲಿಲ್ಲ. ಕೆಲವುಕಡೆಗಳಲ್ಲಿ ಮಾತ್ರ ತರಾತುರಿಯಲ್ಲಿ ಪರಿಶೀಲಿಸಿ ತೆರಳಿದರು ಎನ್ನಲಾಗಿದೆ. ಇನ್ನು ಸಚಿವರು ಮತ್ತು ಜಿಲ್ಲಾಡಿಳಿತದ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. : - . - – – - -.