ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: 1.4 ಲಕ್ಷ ಸಿಬ್ಬಂದಿ ಭರ್ತಿಗೆ ಭಾರತೀಯ ರೈಲ್ವೆ ನಿರ್ಧಾರ ಬೆಂಗಳೂರು,ಆಗಸ್ಟ್07, 2022 (..): ಭಾರತೀಯ ರೈಲ್ವೆ 1.4 ಲಕ್ಷ ಉದ್ಯೋಗಗಳನ್ನು ಭರ್ತಿಗೆ ನಿರ್ಧರಿಸಲಾಗಿದೆ. ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಈ ಕುರಿತು ಮಾಹಿತಿ ನೀಡಿದ್ದು, ಭಾರತೀಯ ರೈಲ್ವೆ 1.4 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. 2014 ಮತ್ತು 2022ರ ನಡುವೆ ಭಾರತೀಯ ರೈಲ್ವೆಯಲ್ಲಿ 3,50,204 ಮಂದಿಗೆ ಉದ್ಯೋಗ ದೊರೆತಿದೆ. ಕೆಲವು ತಿಂಗಳ ಹಿಂದೆ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗಗಳನ್ನ ಭರ್ತಿ ಮಾಡಬೇಕಿತ್ತು. ಪ್ರಧಾನಿ ಮೋದಿ ಆದೇಶ ಹೊರಡಿಸಿದ್ದಾರೆ. ಇದರ ಭಾಗವಾಗಿ 1.4 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುವುದು ಎಂದಿದ್ದಾರೆ. ‘ಈ ವರ್ಷವೇ 18,000 ಮಂದಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ರೈಲ್ವೆ ಒಂದು ದೊಡ್ಡ ಉದ್ಯಮವಾಗಿದೆ ಎಂದು ತಿಳಿಸಿದ್ದಾರೆ.