ಮಿಷನ್ ಆಸ್ಪತ್ರೆಗೆ ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್ ಕೊಡುಗೆ, ಬ್ಲಡ್ ಬ್ಯಾಂಕ್ ಸ್ಥಾಪನೆ: ಪವರ್ ಸ್ಟಾರ್ ನೆನೆದು ಭಾವುಕರಾದ ನಟ ಪ್ರಕಾಶ್ ರೈ. ಮೈಸೂರು,ಆಗಸ್ಟ್,6,2022(..):ಖ್ಯಾತ ನಟ ದಿ. ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮೈಸೂರಿನ ಮಿಷನ್ ಆಸ್ಪತ್ರೆಗೆ ‘ಅಪ್ಪು ಎಕ್ಸ್ ಪ್ರೆಸ್’ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ‘ಅಪ್ಪು ಎಕ್ಸ್ ಪ್ರೆಸ್’ ಆ್ಯಂಬುಲೆನ್ಸ್ ಗೆ ಚಾಲನೆ ನೀಡಿ ಬಳಿಕ ಮಾತನಾಡಿದ ನಟ ಪ್ರಕಾಶ್ ರೈ, ಅಪ್ಪು ಹೆಸರು ಮತ್ತು ಸೇವೆಗಳನ್ನು ಸ್ಮರಿಸುತ್ತಾ ಕೂರಬಾರದು.ಅವರನ್ನು ನಮ್ಮಲ್ಲಿ ಜೀವಂತ ಉಳಿಸಬೇಕಾದರೆ ಅವರು‌ ಮಾಡುತ್ತಿದ್ಧ ಒಳ್ಳೆಯ ಕೆಲಸಗಳನ್ನ ನಾವು ಮಾಡಬೇಕಿದೆ. ಅಪ್ಪು ಜೊತೆ 3 ಚಿತ್ರಗಳನ್ನ ಮಾಡಿದ್ರೂ ಇಬ್ಬರೂ ಉತ್ತಮ ಒಡನಾಟ ಚೆನ್ನಾಗಿತ್ತು. ಅವರು ಮಾಡುತ್ತಿದ್ದ ಒಳ್ಳೆಯ ಕೆಲಸ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕೊರೋನಾ ಸಂದರ್ಭ ನಾನು ಮಾಡುತ್ತಿದ್ದ ಸೇವಾ ಕಾರ್ಯಗಳಿಗೆ ದೇಣಿಗೆ ನೀಡಿ ಅಪ್ಪು ಸಹಾಯ ಮಾಡಿದ್ದರು. ಅದನ್ನು ಎಲ್ಲಿಯೂ ಹೇಳಿರಲಿಲ್ಲ ಎಂದರು. ಮಿಷನ್ ಅಸ್ಪತ್ರೆಯಲ್ಲಿ ಅಪ್ಪು ಹೆಸರಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪನೆ.. ಇನ್ನು ಎರಡ್ಮೂರು ತಿಂಗಳಳ್ಲಿ ಮಿಷನ್ ಅಸ್ಪತ್ರೆಯಲ್ಲಿ ಅಪ್ಪು ಹೆಸರಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡುತ್ತೇವೆ. ರಾಜ್ಯದ 30 ಜಿಲ್ಲೆಗಳಲ್ಲೂ ಅಫ್ಪು ಎಕ್ಸ್ ಪ್ರೆಸ್ ಗೆ ಚಾಲನೆ ಕೊಡುತ್ತೇನೆ. ಅಪ್ಪು ಹೆಸರಲ್ಲಿ ಸೇವಾ ಕಾರ್ಯ ಮಾಡೋಕೆ ನಾನು ಸಂಕೋಚ ಬಿಟ್ಟು ಸ್ನೇಹಿತರ ಸಹಾಯ ಕೇಳುತ್ತೇನೆ. ನನಗೆ ತುಂಬಾ ಜನ ಸ್ನೇಹಿತರಿದ್ದಾರೆ. ಅವರನ್ನ ಕೇಳಿದರೇ ಖಂಡಿತ ಬೆಂಬಲ ಕೊಡ್ತಾರೆ. ಎಲ್ಲರೂ ಸೇರಿ ಅಪ್ಪು ಹೆಸರನ್ನು ಉಳಿಸಿಕೊಳ್ಳುವುದರ ಜತೆಗೆ ಅವರ ಸೇವೆ ಮುಂದುವರಿಸಲು ನಾನು ಕಟಿಬದ್ದ ಎಂದರು. ಅಂಬ್ಯುಲೆನ್ಸ್ ಕೊಡಲು ಕಾರಣವಿದೆ. ಅಂತಹ ಮಹಾನ್ ನಟನಿಗೆ ಸಕಾಲಕ್ಕೆ ಅಂಬ್ಯುಲೆನ್ಸ್ ಸಿಕ್ಕಿದ್ರೆ ಬದುಕುತ್ತಿದ್ದರೇನೋ..? ಇಂತಹ ಸ್ಥಿತಿ ಮುಂದೆ ಬಡವರಿಗೆ ಬರಬಾರದೆಂಬ ಎಂಬ ಉದ್ದೇಶ ನನ್ನದು ಎಂದರು. ನಾವು ನೀವೆಲ್ಲ ಸೇರಲು ಒಂದೇ ಶಕ್ತಿ. ಪ್ರತಿಯೊಬ್ಬರಲ್ಲೂ ಅಗಲಿಕೆ ನೋವು ಕಾಣ್ತಿದೆ. ಅಪ್ಪು ಕಳೆದುಕೊಂಡಾಗ ಅನಾಥ ಪ್ರಜ್ಞೆ ಕಾಡಿತ್ತು. ನಾನು ಈವರಗೆ ಯಾವ ವೇದಿಕೆಯಲ್ಲೂ ಮಾತನಾಡಿರಲಿಲ್ಲ. ಆತನನ್ನ ಒಬ್ಬ ನಟನಾಗಿ ನಾನು ನೋಡಿರಲಿಲ್ಲ. ಬಾಲ್ಯದಿಂದ ನಾನು ನೋಡಿದ್ದೆ. ಅಪ್ಪು ಅವರು ಆಂಬ್ಯುಲೆನ್ಸ್ ಇದ್ದಿದ್ದರೆ ಬದುಕುತ್ತಿದ್ದರು. ಆ ಆಲೋಚನೆ‌ ಬಂದ ತಕ್ಷಣ ನಾನು ನಿರ್ಧರಿಸಿದೆ. ಬಡವರಿಗೆ ಹೆಚ್ಚು ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ಮಿಷನ್ ಆಸ್ಪತ್ರೆ ಆಯ್ಕೆ ಮಾಡಿಕೊಂಡೆ. ಕೋವಿಡ್ ವೇಳೆ ಪ್ರಕಾಶ್ ಫೌಂಡೇಷನ್ ವತಿಯಿಂದ ಊಟ, ವಸತಿ ನೀಡಿದ್ದೆವು. ಪುನೀತ್ ರಾಜಕುಮಾರ್ ಧನ ಸಹಾಯ ಮಾಡಿದ್ದರು. ಡಾ.ರಾಜ್ ಫೌಂಡೇಷನ್ ನಿಂದ ಎರಡು ಲಕ್ಷ ನೀಡಿದ್ದರು. ಪ್ರತಿಯೊಬ್ಬರಿಗೂ ಪುನೀತ್ ಸಹಾಯ ಮಾಡಿದ್ದರು. ಆ ವ್ಯಕ್ತಿ ಇದ್ದಿದ್ದರೆ ಮಾಡುತ್ತಿದ್ದ ಕೆಲಸವನ್ನ ನಾವು ಮಾಡಬೇಕಿದೆ. ಅವರ ವ್ಯಕ್ತಿತ್ವ ಉಳಿಸಿ ಬೆಳಡಸಿಕೊಂಡು ಹೋಗುವುದು ಮುಖ್ಯ ಎಂದು ಪ್ರಕಾಶ್ ರೈ ತಿಳಿಸಿದರು. ಬಾಲ‌ನಟನಾಗಿ ರಾಷ್ಟ್ರಪ್ರಶಸ್ತಿ ಪಡೆದವರು. 45 ವರ್ಷಕ್ಕೆ ಕಾಲವಾದಾಗ ನಾವು ಸಾಕಷ್ಟು ಕಳೆದುಕೊಂಡೆವು. ಶ್ರೀಮಂತ ಮನೆತನದಲ್ಲಿ ಹುಟ್ಡಿದರೂ ಸರಳವಾಗಿ ಬದುಕಿದರು. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಒಮ್ಮೆ ಮಾತನಾಡಿಕೊಂಡಿದ್ದವು. ಎತ್ತರಕ್ಕೆ ಬೆಳೆಯುವುದು ಮುಖ್ಯವಲ್ಲ. ಆ ವ್ಯಕ್ತಿಯಿಂದ ಮತ್ತಷ್ಟು ಜನರು ಎತ್ತರಕ್ಕೆ ಬೆಳೆಯುವುದು ಎಂದಿದ್ದೆ. ಅದೇ ನಮ್ಮ ನಿಮ್ಮೆಲ್ಲರ ಅಪ್ಪು ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ನೆನಪಿಸಿಕೊಂಡು ನಟ ಪ್ರಕಾಶ್ ರೈ ಭಾವುಕರಾದರು. ನಿರ್ದೇಶಕ ಆನಂದ್ ರಾಮ್ ಮಾತನಾಡಿ, ಸರ್ ಫೋನ್ ಮೂಲಕ ಅಪ್ಪು ಎಕ್ಸ್ ಪ್ರೆಸ್ ಶುರು ಮಾಡೋಣ ಅಂದ್ರು. ಆಂಬ್ಯುಲೆನ್ಸ್ ಗೆ ಅಪ್ಪು ಎಕ್ಸ್‌ ಪ್ರೆಸ್‌ ಅಂಥ‌ ಹೆಸರಿಟ್ಟಿದ್ದೇವೆ. ಮೈಸೂರಿನಿಂದ ಈ ಕೆಲಸ ಆರಂಭ ಅಗಿದೆ. 32 ಜಿಲ್ಲೆಗಳಲ್ಲೂ ಅಪ್ಪು ಎಕ್ಸ್ ಪ್ರೆಸ್ ಓಡಾಡುತ್ತೆ. ಅಪ್ಪು ಅವರು ಜನರ ಮನಸ್ಸಿನಲ್ಲಿ ದೇವರ ಸ್ಥಾನದಲ್ಲಿದ್ದಾರೆ. ಅಪ್ಪು ಕೊಟ್ಟಿದ್ದನ್ನ ಎಲ್ಲಿಯೂ ಹೇಳಿಕೊಂಡಿಲ್ಲ. ಬಲಗೈಲ್ಲಿ ಕೊಟ್ಟಿದ್ದು ಎಡಗೈ ಗೊತ್ತಾಗದಂತೆ ಕೆಲಸ ಮಾಡಿದ್ದಾರೆ. ಸಪ್ಲೈಯರ್ ಒಬ್ರು ನಮ್ಮ ತಂದೆ ಅಪರೇಷನ್ ಗೆ 50 ಸಾವಿರ ಕೊಟ್ಟಿದ್ದಾರೆ ಎಂದು ನೆನಸಿಕೊಂಡು ಕಣ್ಣೀರು ಹಾಕಿದರು. ಅಪ್ಪು ಸರ್ ವ್ಯಕ್ತಿತ್ವವನ್ನ ಎಲ್ಲರಲ್ಲೂ ಕಾಣಲೂ ಈ ರೀತಿ ಮಾಡುತ್ತಿದ್ದೇವೆ. ಅಪ್ಪು ಅವರ ವ್ಯಕ್ತಿತ್ವ ಇಡೀ ಭಾರತಕ್ಕೆ ಗೊತ್ತಾಗಬೇಕು. ಅಪ್ಪು ಅವರ ಜೊತೆ ಎರೆಡು ಸಿನಿಮಾ ಮಾಡಿದ್ದೇವೆ. ಪುನೀತ್ ಒಬ್ರು ಮಾಹನ್ ವ್ಯಕ್ತಿ. ಅಪ್ಪು ನಿಸ್ವಾರ್ಥ ಸೇವೆ ನೀಡಿದ್ದಾರೆ ಎಂದು ನಿರ್ದೇಶಕ ಆನಂದ್ ರಾಮ್ ತಿಳಿಸಿದರು. : - - - - … : , 6, 2022 (..): ‘ ’ . , . “ , . 3 . . . ,” . “ - . 30 . ’ . . . ’ ,” .“ . …? ,” .“ ’ . . . . . . , . . . . . 2 . . . . ,” . . 50 ’ . “ . . ,” .: / / /