ಈ ವರ್ಷವೂ ವಾರ್ಡ್ ಗೆ ಒಂದೇ ಗಣೇಶ ಕೂರಿಸಬೇಕು- ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್. ಬೆಂಗಳೂರು,ಆಗಸ್ಟ್,6,2022(..):ಸಂಭ್ರಮ ಸಡಗರದಿಂದ ಆಚರಿಸುವ ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದು, ಕೆಲವೇ ದಿನಗಳಷ್ಟೆ ಬಾಕಿ ಇದೆ. ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಹಬ್ಬ ಆಚರಣೆ ಮಾಡಿಲ್ಲ. ಹೀಗಾಗಿ ಈ ಬಾರಿ ಅದ್ಧೂರಿಯಾಗಿ ಗಣೇಶ್ ಹಬ್ಬ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಈ ಕಳೆದ ಬಾರಿಯಂತೆ ಈ ಬಾರಿಯೂ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ವಾರ್ಡ್ ಗೆ ಒಂದೇ ಗಣೇಶ ಕೂರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಹೇಳಿದ್ದಾರೆ. ಈ ಸಂಬಂಧ ಗೌರಿ ಗಣೇಶ ಹಬ್ಬಕ್ಕೆ ನಿಯಮಗಳ ಬಗ್ಗೆ ಮಾತನಾಡಿರುವ ಅವರು, ಈ ವರ್ಷವೂ ವಾರ್ಡ್ ಗೆ ಒಂದೇ ಗಣೇಶ ಕೂರಿಸಬೇಕು. ಪಿಒಪಿ ಗಣೇಶವನ್ನು ಕೂರಿಸುವಂತಿಲ್ಲ. ಪಿಒಪಿ ಗಣೇಶ ತಯಾರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. : – - –-- - .