ರಾಜ್ಯಪಾಲರ ಹೆಸರಿನಲ್ಲಿ ವಂಚನೆ ಮಾಡಿದ್ಧ ಆರೋಪಿಯ ಬಂಧನ. ಬೆಂಗಳೂರು,ಆಗಸ್ಟ್,6,2022(..):ರಾಜ್ಯಪಾಲರ ಹೆಸರು ಹೇಳಿ ವಂಚನೆ ಮಾಡಿದ್ಧ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿವಿ ಸಿಂಡಿಕೇಟ್ ಸದಸ್ಯ ಮಾಡುವುದಾಗಿ ನಂಬಿಸಿ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಹೆಸರಿನಲ್ಲಿ ವಂಚನೆ ಮಾಡಿದ್ದ, ಬಳ್ಳಾರಿ ಮೂಲದ ಸದರುಲ್ಲಾ ಖಾನ್​ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸದರುಲ್ಲಾ ಖಾನ್ ತಾನು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದು, ಎಲ್ಲಾ ವಿವಿಗಳಿಗೆ ಸೆನೆಟ್ ಸದಸ್ಯ ಎಂದು ನಂಬಿಸಿದ್ದ. ಈ ನಡುವೆ ನಕಲಿ ಗುರುತಿನ ಚೀಟಿ ಮಾಡಿಕೊಂಡು ಆರೋಪಿ ಸದರುಲ್ಲಾ ಖಾನ್ ಓಡಾಡುತ್ತಿದ್ದ. ಇನ್ನೂ ರಾಜ್ಯಪಾಲರ ಕಚೇರಿ ಹೆಸರು ಬಳಸಿಕೊಂಡು ವಂಚಿಸುತ್ತಿದ್ದ ವಿಚಾರ ತಿಳಿದ ತಕ್ಷಣ ರಾಜ್ಯಪಾಲರ ಕಚೇರಿ ಸಿಬ್ಬಂದಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯಾರು ತನ್ನ ಮೇಲೆ ಅನುಮಾನ ಪಡೋದಿಲ್ಲ ಎಂದು ರಾಜ್ಯಪಾಲರ ಹೆಸರು ಬಳಕೆ ಮಾಡಿದ್ದು, ಗವರ್ನರ್ ಕಚೇರಿಯಿಂದ ಎಂದು ಕೆಲವು ಗಣ್ಯ ವ್ಯಕ್ತಿಗಳಿಗೂ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ನಿಮ್ಮವರನ್ನ ಸಿಂಡಿಕೇಟ್ ಸದಸ್ಯರಾಗಿ ಮಾಡುತ್ತೇನೆ ಎಂದು ಆರೋಪಿ ಸದರುಲ್ಲಾ ಖಾನ್ ಕರೆ ಮಾಡಿ ವಂಚಿಸಿದ್ಧ ಎನ್ನಲಾಗಿದೆ. ಪ್ರಕರಣ ಸಂಬಂಧ ಆರೋಪಿ ಸದರುಲ್ಲಾ ಖಾನ್ ನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. : – – – –