: ಲಕ್ಷಾಂತರ ವಿದ್ಯಾರ್ಥಿಗಳಿಗೆ ಹೈಕೋರ್ಟ್ ಸಿಹಿ ಸುದ್ಧಿ. ಬೆಂಗಳೂರು, ಆ.04, 2022 : (.. )ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2013-14, 2014-2015 ನೇ ಸಾಲುಗಳ ಮಾನ್ಯತೆ ತೊಡಕಿಗೆ ಸಿಲುಕಿದ್ದ - - ವಿದ್ಯಾರ್ಥಿಗಳಿಗೆ ರಾಜ್ಯ ಹೈಕೋರ್ಟ್ ಇಂದು ಸಿಹಿ ಸುದ್ಧಿ ನೀಡಿದೆ. -ಕರಾಮುವಿ 2 ತಿಂಗಳ ಅವದಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಹಿನ್ನೆಲೆ : 2013 ನೇ ಸಾಲಿಗಿಂತ ಹಿಂದಿನ ಮಾನ್ಯತೆ ಇದ್ದ ಅವದಿಯ ವಿವಿ ಪದವಿಗಳನ್ನೂ ತಿರಸ್ಕರಿಸುತ್ತಿದ್ದ ಕಾರಣ ರಾಜ್ಯ ಸರ್ಕಾರ ಹಾಗೂ ಕೆಪಿಎಸ್ಸಿ ವಿರುದ್ದ ಕೋರ್ಟ್ ಮೊರೆ ಹೋಗಲಾಗಿತ್ತು. ( 34255/2016ರ 27.6.2017). ಪ್ರಕರಣದಲ್ಲಿ ವಿವಿ ಪರ ತೀರ್ಪಿನಂತೆ ವಿವಿ ಪದವೀದರನ್ನು ಪರಿಗಣಿಸಲು ಅನುಕೂಲ ಮಾಡಿಕೊಡಲಾಗಿತ್ತು. ಕರಾಮುವಿ ಶಿಕ್ಷಕೇತರ ನೌಕರರ ಸಂಘ(ರಿ) ಸಲ್ಲಿಸಿರುವ 48379/2017 ಪ್ರಕರಣದಲ್ಲಿನ 01.02.2018ರ ಮಧ್ಯಂತರ ಆದೇಶ ( ) ಅನ್ವಯ ರಾಜ್ಯ ಸರ್ಕಾರ 03.05.2018 ರಂದು ಆದೇಶ ಹೊರಡಿಸಿ ಕರಾಮುವಿಯ 2013-14, 2014-2015ನೇ ಸಾಲುಗಳ ಯುಜಿಸಿ ಮಾನ್ಯತೆ ತೊಡಕಿಗೆ ಸಿಲುಕಿದ್ದ - ವಿದ್ಯಾರ್ಥಿಗಳ ಪದವಿಗಳನ್ನು ನೇಮಕಾತಿ/ಬಡ್ತಿ ಹಾಗೂ ಉನ್ನತ ವ್ಯಾಸಂಗಕ್ಕೆ ಪರಿಗಣಿಸಲು ಆದೇಶಿಸಿತ್ತು. ಈ ಅವಧಿಯಲ್ಲಿ ಕುಲಪತಿಯಾಗಿದ್ದ ಪ್ರೊ.ಶಿವಲಿಂಗಯ್ಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆ ಮೂಲಕ ಅವರ ಹಿಂದಿನ ಶ್ರಮವೂ ಕೋರ್ಟ್ ನ ಈ ಆದೇಶಕ್ಕೆ ಕಾರಣವಾಗಿದೆ. ಮೇಲಿನ ತೀರ್ಪಿಗೊಳಪಟ್ಟಿರುವ ಪ್ರಕರಣಗಳಲ್ಲಿನ ಮಧ್ಯಂತರ ಆದೇಶ ( ) ಆಧಾರದಲ್ಲಿ ವಿವಿಯು 2019 ರಿಂದಲೂ ಅಂಕಪಟ್ಟಿ ಹಾಗೂ ನೀಡುತ್ತಾ ಬರುತ್ತಿದೆ. ಪ್ರಸ್ತುತ ಈ 03.08.2022ರ Judgmentಗೆ ಒಳಪಟ್ಟಿರುವ 2013-14 & 2014-15 - ವಿದ್ಯಾರ್ಥಿಗಳ ಈ ಪ್ರಕರಣಗಳಲ್ಲಿ ಯುಜಿಸಿ ವಿರುದ್ಧ ಇದ್ದು, ಅವರ ಶಿಕ್ಷಣ ಕ್ರಮ ಮತ್ತು ಪದವಿಗಳು ತಾಂತ್ರಿಕವಾಗಿ ನಿಯಮಾನುಸಾರ ವಿದ್ದುದರಿಂದ ಹಾಗೂ ಯುಜಿಸಿ ತಜ್ಞರ ಸಮಿತಿ ವಿವಿಯಿಂದ ನೇರವಾಗಿ ನಿರ್ವಹಿಸಲ್ಪಡುವ ಈ ಪ್ರವೇಶಾತಿ/ ಪದವಿಗಳ ಬಗ್ಗೆ ಯಾವುದೇ ತಕರಾರು ವ್ಯಕ್ತಪಡಿಸದಿದ್ದುದರಿಂದ ವಿದ್ಯಾರ್ಥಿಗಳಿಗೆ ಒತ್ತಾಸೆಯಾಗಿಯೇ ವಿವಿ ಪರವಾದ ಹಾಗೂ ದಾಖಲೆಗಳನ್ನು ಮಂಡಿಸಲಾಗಿದ್ದು ಈ ದಿವಸ ಈ ಮಹತ್ವದ ತೀರ್ಪಿಗೆ ದಾರಿಯಾಗಿದೆ. ತೀರ್ಪಿನಲ್ಲಿ, ಕರಾಮುವಿಯು 2 ತಿಂಗಳ ಅವದಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆ ಸೂಚಿಸಿದೆ. ಯುಜಿಸಿ, 6 ವಾರಗಳ ಅವದಿಯೊಳಗೆ ವಿಚಾರಣೆಯನ್ನು ನಡೆಸಿ ಕರಾಮುವಿಯ ಮತ್ತು - ವ್ಯವಸ್ಥೆಯ ಮೂಲಕ ರಿಟ್ ಅರ್ಜಿದಾರರ ವ್ಯಾಸಂಗವಾಗಿದೆಯೇ, ಈ ಸಂದರ್ಭದಲ್ಲಿ ವಿವಿಯಿಂದ ಯ ನಿಯಮಗಳು, ಶೈಕ್ಷಣಿಕ ಮಾನದಂಡಗಳೇನಾದರೂ ಉಲ್ಲಂಘನೆಯಾಗಿವೆಯೇ ಎಂಬುದನ್ನು ಪರಿಶೀಲಿಸಿ ಮಾನ್ಯತೆ ನೀಡಲು ಪರಿಗಣಿಸತಕ್ಕದ್ದು ಹಾಗೂ ಈ‌ ಪ್ರಕ್ರಿಯೆಗೆ ಕರಾಮುವಿಯು ಪೂರಕ ದಾಖಲೆಗಳನ್ನು ಒದಗಿಸತಕ್ಕದ್ದೆಂದು ಆದೇಶಿಸಿದೆ. ಈ ಮೇಲಿನ ಅಂಶಗಳ ಬಗ್ಗೆ ಆದೇಶ ಹೊರಡಿಸಿದೆ. : -.-.---