ಮೈಸೂರಿನಲ್ಲಿ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ-20 ಟೂರ್ನಿ ಉದ್ಘಾಟಿಸಿದ ನಟ ಕಿಚ್ಚ ಸುದೀಪ್. ಮೈಸೂರು,ಆಗಸ್ಟ್,4,2022(..):ಮೈಸೂರಿನಲ್ಲಿ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ-20 ಟೂರ್ನಿಯನ್ನ ನಟ ಕಿಚ್ಚ ಸುದೀಪ್ ಉದ್ಘಾಟಿಸಿದರು. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಟ್ರೋಫಿ ಕೆಎಸ್ ಸಿಎ ಟಿ-20 ಟೂರ್ನಿಯ ಕಪ್ ಅನಾವರಣ ಮಾಡಿದ ನಟ ಸುದೀಪ್ ನಂತರ 6 ತಂಡಗಳ ನಾಯಕರುಗಳ ಹೆಸರನ್ನ ಪ್ರಕಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ಭಾಗಿಯಾಗಿದ್ದರು. ಮೈಸೂರು ಮಾನಸ ಗಂಗೋತ್ರಿಯ ಶ್ರೀಕಂಠ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಇದೇ ಭಾನುವಾರದಿಂದ ಟೂರ್ನಿ ಆರಂಭವಾಗಲಿದ್ದು, ಮೈಸೂರು ವರಿಯರ್ಸ್ ತಂಡದ ನಾಯಕನಾಗಿ ಕರುಣ್ ನಾಯಕ್, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ ತಂಡಕ್ಕೆ ಮಾಯಂಕ್ ಅಗರ್ವಾಲ್, ಗುಲ್ಬರ್ಗ ಮೈಸ್ಟಿಕ್ ತಂಡಕ್ಕೆ ಮನೀಶ್ ಪಾಂಡೆ, ಶಿವಮೊಗ್ಗ ಸ್ಟ್ರೈಕರ್ಸ್ ತಂಡಕ್ಕೆ ಕೆ. ಗೌತಮ್, ಮಂಗಳೂರು ಯುನೈಟೆಡ್ ತಂಡಕ್ಕೆ ಸಮರ್ಥ್, ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ವೇಗದ ಬೌಲರ್ ಅಭಿಮನ್ಯು ಮಿಥುನ್ ನಾಯಕರಾಗಿ ಆಯ್ಕೆಯಾದರು. ಈ ವೇಳೆ ಆರು ತಂಡಗಳಿಗೆ ನಟ ಸುದೀಪ್ ಶುಭ ಕೋರಿದರು. : – - – - -20- – .