ಸಿದ್ಧರಾಮಯ್ಯ ಮುಂದಾಳತ್ವದಲ್ಲಿ ನಾವೆಲ್ಲಾ ಕೆಲಸ ಮಾಡೋಣ: ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯೋಣ- ಡಿ.ಕೆ ಶಿವಕುಮಾರ್ ಕರೆ. ದಾವಣಗೆರೆ,ಆಗಸ್ಟ್,3,2022(..):ನಾವೆಲ್ಲರೂ ಸಿದ್ಧರಾಮಯ್ಯ ಮುಂದಾಳತ್ವದಲ್ಲಿ ಕೆಲಸ ಮಾಡೋಣ. ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸೋಣ. ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯುವ ಸಂಕಲ್ಪ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದರು. ಬೆಣ್ಣೆ ನಗರಿ ದಾವಣಗೆರೆಯ ಎಸ್ ಎಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಾಜಿ ಸಿಎಂ ಸಿದ್ಧರಾಮಯ್ಯರ 75ನೇ ಜನ್ಮದಿನದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು… ಇಂದು ನಾಯಕ ಸಿದ್ಧರಾಮಯ್ಯನವರ ಹುಟ್ಟುಹಬ್ಬ ಆಚರಣೆ. ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ತುಂಬಿದೆ. ಹೀಗಾಗಿ ದೇಶಕ್ಕೂ ಸಂಭ್ರಮ, ಕಾಂಗ್ರೆಸ್ ಗೂ ಸಂಭ್ರಮ. 2013ರಲ್ಲಿ ರಾಹುಲ್ ಗಾಂಧಿ ಸೋನಿಯಾಗಾಂಧಿ ಸಿಎಂ ಆಗಿ ಸಿದ್ಧರಾಮಯ್ಯರನ್ನ ನೇಮಿಸಿದ್ದರು. ಬಸವ ಜಯಂತಿ ದಿನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸಿದ್ಧರಾಮಯ್ಯನವರ ಆಡಳಿತ ನೋಡಿದ್ದೇವೆ. ಬಸವಣ್ಣನವರ ತತ್ವವೇ ಕಾಂಗ್ರೆಸ್ ತತ್ವವಾಗಿದೆ. ಸಿದ್ಧರಾಮೋತ್ಸವ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಸಂತೋಷಪಟ್ಟೆ. ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ರಾಹುಲ್ ಗಾಂಧಿಗೆ ಧನ್ಯವಾದಗಳು ಎಂದರು. ಅನ್ನಭಾಗ್ಯ ಸೇರಿ ಹಲವು ಜನರ ಯೋಜನೆ ಜಾರಿಗೆ ತಂದರು. ಸಿದ್ಧರಾಮಯ್ಯರನ್ನ ಕೇವಲ ಹಿಂದುಳಿದ ನಾಯಕ ಎಂದು ಬಿಂಬಿಸಬೇಡಿ. ಸಿದ್ಧರಾಮಯ್ಯ ಕೇವಲ ಹಿಂದೂಳಿದ ನಾಯಕ ಅಲ್ಲ. ಸರ್ವಜನಾಂಗ, ಸರ್ವಧರ್ಮಕ್ಕೂ ನಾಯಕ. ಸಿದ್ದರಾಮಯ್ಯಗೆ ಉತ್ತಮ ಆರೋಗ್ಯ, ಈ ರಾಜ್ಯಕ್ಕೆ ಬಲಿಷ್ಠ ಸೇವೆ ನೀಡುವ ಶಕ್ತಿ ನೀಡಲಿ ಎಂದು ಡಿಕೆಶಿವಕುಮಾರ್ ಹೇಳಿದರು . : -: – - –- … : – , 3, 2022 (..): “ . . ,” .. . 75th , .. , . , .. , “ ’ . 75 . , . 2013. - . . ’ . . .”“ - ‘’. ’ . . ,” .: / / ..