ಏಷ್ಯಾ ಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ: ಆಗಸ್ಟ್ 28ಕ್ಕೆ ಭಾರತ-ಪಾಕಿಸ್ತಾನ ಫೈಟ್ ಬೆಂಗಳೂರು, ಆಗಸ್ಟ್ 03, 2022 (..): ಏಷ್ಯಾ ಕಪ್ 2022 ರ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ. ಪಂದ್ಯಾವಳಿಯು ಆಗಸ್ಟ್ 27 ರಂದು ಪ್ರಾರಂಭವಾಗಲಿದೆ ಮತ್ತು ಫೈನಲ್ ಸೆಪ್ಟೆಂಬರ್ 11ರಂದು ನಡೆಯಲಿದೆ. ವಿಶೇಷ ಎಂದರೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್ ಪರಸ್ಪರ ಎದುರಾಗಲಿವೆ. ಆಗಸ್ಟ್ 28 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಕುರಿತಂತೆ ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಟ್ವಿಟ್ ನಲ್ಲಿ ಮಾಹಿತಿ ನೀಡಿದ್ದು, ಆಗಸ್ಟ್ 27 ರಿಂದ ಏಷ್ಯಾ ಕಪ್ 2022 ಆರಂಭಗೊಂಡು ಸೆಪ್ಟೆಂಬರ್ 11ರಂದು ಫೈನಲ್ ಪಂದ್ಯ ನಡೆಯಲಿದೆ.