ವಿದ್ಯುತ್ ತಂತಿ ತುಂಡಾಗಿ ಶಾಕ್‌ನಿಂದ ರೈತ ಸಾವು ಮೈಸೂರು,ಜುಲೈ,24,2024 (..):ವಿದ್ಯುತ್ ತಂತಿ ತುಂಡಾಗಿ ಶಾಕ್‌ನಿಂದ ರೈತ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕು ಕನ್ನಾಯಕ‌ನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿಂಗೇಗೌಡ (60) ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ ರೈತ. ನಿಂಗೇಗೌಡ ಜಮೀನಿಗೆ ನಡೆದುಕೊಂಡು ಹೋಗುವಾಗ ಈ ಅವಘಡ ಸಂಭವಿಸಿದೆ. ಇದ್ದಕ್ಕಿದಂತೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಸ್ಥಳಕ್ಕೆ ಬಾರದ ಚೆಸ್ಕಾಂ ಸಿಬ್ಬಂದಿ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. : , , ,