ಆಂಧ್ರ ಪ್ರದೇಶ ಮಾಜಿ ಸಿಎಂ ದಿ. ಎನ್ ಟಿಆರ್ ಅವರ ಕಿರಿಯ ಪುತ್ರಿ ಉಮಾಮಹೇಶ್ವರಿ ಆತ್ಮಹತ್ಯೆಗೆ ಶರಣು. ಹೈದರಾಬಾದ್,ಆ,1,2022(..):ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ಎನ್.ಟಿ.ರಾಮರಾವ್ ಅವರ ಕಿರಿಯ ಪುತ್ರಿ ಉಮಾ ಮಹೇಶ್ವರಿ(52) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜುಬಿಲಿ ಹಿಲ್ಸ್ ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ನಲಾಗಿದೆ. ಖಿನ್ನತೆಗೆ ಒಳಗಾಗಿದ್ದ ಉಮಾಮಹೇಶ್ವರಿ ತನ್ನ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜುಬಿಲಿ ಹಿಲ್ಸ್ ಪೊಲೀಸರು ಶವಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಮೃತದೇಹ ಸ್ಥಳಾಂತರಿಸಲಾಗಿದೆ. ಇನ್ನು ಅನುಮಾನಸ್ಪದ ಸಾವು ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು ಈ ಕುರಿತು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : . -’- - -.