ಬಿಜೆಪಿ ಸರ್ಕಾರವನ್ನ ಬೇರು ಸಮೇತ ಕಿತ್ತು ಹಾಕುವವರೆಗೂ ಈ ಪರಿಸ್ಥಿತಿ ಬದಲಾಗಲ್ಲ- ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ. ಬೆಂಗಳೂರು,ಜುಲೈ,28,2022(..):ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ಸರ್ಕಾರವನ್ನ ಬೇರು ಸಮೇತ ಕಿತ್ತು ಹಾಕುವವರೆಗೂ ಈ ಪರಿಸ್ಥಿತಿ ಬದಲಾಗಲ್ಲ ಎಂದು ಗುಡುಗಿದ್ದಾರೆ. ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಇನ್ನೂ ಎಷ್ಟು ಜನ ಅಮಾಯಕರು ಸಾಯಬೇಕು..? ಕರಾವಳಿ ಆಯ್ತು, ಶಿವಮೊಗ್ಗ ಆಯ್ತು. ಈಗ ಮುಂದೆ ಎಲ್ಲಿ..? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ. ಈ ಸರ್ಕಾರದಲ್ಲಿ ಜೀವಕ್ಕೆ ಬೆಲೆ ಇಲ್ಲ. ಇದೇನಾ ನೀವು ಹಿಂದೂ ಧರ್ಮ ಕಾಪಾಡೋದು ಎಂದು ಕಿಡಿಕಾರಿದರು. ಹಿಂದುತ್ವ ಕಾರ್ಡ್ ನಲ್ಲಿ ಮತ ಪಡೆಯುವ ಲೆಕ್ಕಾಚಾರ ಬಿಜೆಪಿಯದ್ದು. ಸಾವುಗಳಾದರೇ ಅಧಿಕಾರ ಪಡೆಯಬಹುದೆಂಬ ಪ್ಲಾನ್. ಬಿಜೆಪಿ ಸರ್ಕಾರವನ್ನ ಬೇರು ಸಮೇತ ಕಿತ್ತು ಹಾಕಬೇಕು. ಅಲ್ಲಿವರೆಗೂ ಈ ಪರಿಸ್ಥಿತಿ ಬದಲಾಗಲ್ಲ ಎಂದು ಹೆಚ್.ಡಿಕೆ ಹರಿಹಾಯ್ದರು. : – – - – -