ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಬೊಮ್ಮಾಯಿ ದುರ್ಬಲ ಸಿಎಂ- ಸಿದ್ಧರಾಮಯ್ಯ ಕಿಡಿ. ಬೆಂಗಳೂರು,ಜುಲೈ,29,2022(..):ರಾಜ್ಯದಲ್ಲಿ ಸರಣಿ ಹತ್ಯೆಗಳು ಆಗ್ತಿವೆ. ಸರ್ಕಾರದಿಂದ ಯಾರನ್ನೂ ರಕ್ಷಣೆ ಮಾಡಲು ಆಗುತ್ತಿಲ್ಲ. ಬಸವರಾಜ ಬೊಮ್ಮಾಯಿ ದುರ್ಬಲ ಸಿಎಂ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು. ಕರಾವಳಿಯಲ್ಲಿ ಸಾಲು ಸಾಲು ಕೊಲೆ ಪ್ರಕರಣ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜ್ಯದಲ್ಲಿ ಸಂಫೂರ್ಣವಾಗಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಸರ್ಕಾರದಿಂದ ಯಾರನ್ನೂ ರಕ್ಷಣೆ ಮಾಡಲು ಆಗುತ್ತಿಲ್ಲ . ಇಂಟಲಿಜೆನ್ಸ್ ಕೂಡ ಸಿಎಂ ಬಳಿಯೇ ಇದೆ. ಆದರೇ ರಾಜ್ಯದಲ್ಲಿ ಸರಣಿ ಹತ್ಯೆಗಳು ಆಗ್ತಿವೆ. ಇದರ ಹೊಣೆಯನ್ನ ಸಿಎಂ ಬೊಮ್ಮಾಯಿ ಹೊರಬೇಕು ಎಂದರು. ಆರಗ ಜ್ಞಾನೇಂದ್ರ ಸಚಿವರಾಗಿ ಮಂದುವರೆಯಲು ನೈತಿಕತೆ ಇಲ್ಲ. ಸರ್ಕಾರ ಕೂಡಲೇ ಕೊಲೆ ಆರೋಪಿಗಳನ್ನ ಪತ್ತೆ ಹಚ್ಚಬೇಕು. ಫಾಜಿಲ್, ಪ್ರವೀಣ್ ಯಾರೇ ಆದರೂ ಎಲ್ಲವೂ ಜೀವಗಳೇ. ಮತಾಂಧ ಶಕ್ತಿಗಳು ಯಾರೇ ಆಗಲಿ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸಿದ್ಧರಾಮಯ್ಯ ಆಗ್ರಹಿಸಿದರು. : –- : –- - … .: . – , 29, 2022 (..): “ , , ’ . ,” . , . . . . . ? , ? ,” .: / / /