ಆಗಸ್ಟ್’ನಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಸಾಯಿ ಪಲ್ಲವಿ ‘ಗಾರ್ಗಿ’ ಬೆಂಗಳೂರು, ಜುಲೈ 28, 2022 (..):ನಟಿ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಲು ಕಾಲ ಕೂಡಿ ಬಂದಿದೆ. ಆಗಸ್ಟ್​ 2ನೇ ವಾರದಲ್ಲಿ ‘ಸೋನಿ ಲಿವ್​’ ಮೂಲಕ ಈ ಸಿನಿಮಾ ಬಿತ್ತರ ಆಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ‘ಗಾರ್ಗಿ’ ಸಿನಿಮಾ ಮೇಲೆ ಸಾಯಿ ಪಲ್ಲವಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಸದ್ದು ಗದ್ದಲ ಇಲ್ಲದೇ ಶೂಟಿಂಗ್​ ಮುಗಿಸಿದ ಚಿತ್ರ ಥೀಯೇಟರ್ ಗಳಲ್ಲಿ ರಿಲೀಸ್ ಆಗಿತ್ತು. ಆದರೆ ಚಿತ್ರ ಚಿತ್ರಮಂದಿಗಳಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ತಂದೆ-ಮಗಳ ನಡುವಿನ ಬಾಂಧವ್ಯದ ಕಥೆ ಇರುವ ಈ ಸಿನಿಮಾ ಜುಲೈ 15ರಂದು ತೆರೆಕಂಡಿತು. ಚಿತ್ರಕ್ಕೆ ಉತ್ತಮ ವಿಮರ್ಶೆ ವ್ಯಕ್ತವಾಗಿದ್ದರೂ ಗಳಿಕೆ ವಿಷಯದಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಮೂಲಗಳ ಪ್ರಕಾರ ‘ಗಾರ್ಗಿ’ ಚಿತ್ರದ ಒಟಿಟಿ ಹಕ್ಕುಗಳನ್ನು ‘ಸೋನಿ ಲಿವ್​’ ಖರೀದಿಸಿದೆ. ಆಗಸ್ಟ್​ ಎರಡನೇ ವಾರದಲ್ಲಿ ಇದರ ಸ್ಟ್ರೀಮಿಂಗ್​ ಆರಂಭಿಸಲಿದೆ ಎನ್ನಲಾಗುತ್ತಿದೆ.