ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಜೋರು ! ಬೆಂಗಳೂರು, ಜುಲೈ 26, 2022 (..):ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಮದುವೆಗೆ ಸಜ್ಜಾಗಿದ್ದಾರೆ. ಇದಕ್ಕಾಗಿ ಸಕಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಮನೋರಂಜನ್‌ಗೆ ಮದುವೆ ಸಂಬಂಧ ಕುಟುಂಬ ಅಧಿಕೃತವಾಗಿ ಇನ್ನು ಮಾಹಿತಿ ಹಂಚಿಕೊಂಡಿಲ್ಲ. ಆದರೆ ಮದುವೆ ಮದುವೆ ಆಮಂತ್ರಣ ಪ್ರತ್ರಿಕೆಯ ಸೋರಿಕೆ ಆಗಿದೆ. ರವಿಚಂದ್ರನ್‌ ಈ ಹಿಂದೆ ಮಗಳ ಮದುವೆ ಪತ್ರಿಕೆಯನ್ನೂ ಕೂಡ ಅತ್ಯಂತ ವಿಶೇಷವಾಗಿ ಮಾಡಿಸಿದ್ದರು. ಈಗ ಮಗನ ಮದುವೆ ಪತ್ರಿಕೆ ಕೂಡ ವಿಶೇಷವಾಗಿದೆ. ಈ ಫೊಟೋ ಬಗ್ಗೆಯೂ ರವಿಚಂದ್ರನ್ ಕುಟುಂಬದಿಂದ ಯಾವುದೇ ರೀತಿಯ ಸ್ಪಷ್ಟನೆ ಬಂದಿಲ್ಲ.