ವಿಕ್ರಾಂತ್ ರೋಣ ರಿಲೀಸ್ ವೇಳೆ ಕಿಚ್ಚ-ಅಪ್ಪು ಕಟೌಟ್ ! ಬೆಂಗಳೂರು, ಜುಲೈ 23, 2022 (..):ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆ ವೇಳೆ ಅಪ್ಪು ಕಟೌಟ್ ಹಾಕುತ್ತಿದ್ದಾರೆ ಅಭಿಮಾನಿಗಳು. ಹೌದು, ಚಿತ್ರ ಬಿಡುಗಡೆ ವೇಳೆ ಸುದೀಪ್ ಕಟೌಟ್ ಜೊತೆಗೆ ಪುನೀತ್ ಕೂಡಾ ಇರುವ ಕಟೌಟ್ ಹಾಕಿಸಿ ಇಬ್ಬರ ನಡುವಿನ ಸ್ನೇಹದ ಕೊಂಡಿಯನ್ನು ಸ್ಮರಿಸಲಾಗುತ್ತಿದೆ. ಜುಲೈ 28 ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾ ಪ್ರಚಾರಕ್ಕಾಗಿ ಸುದೀಪ್ ಅಭಿಮಾನಿಗಳು ಬೃಹತ್ ಕಟೌಟ್ ಇರಿಸುತ್ತಿದ್ದಾರೆ. ಸುದೀಪ್ ಕಟೌಟ್ ಜೊತೆಗೆ ಪುನೀತ್ ಕೂಡಾ ಇರುವ ಕಟೌಟ್ ಹಾಕಿಸಿ ಅಭಿಮಾನ ಮೆರೆಯಲು ಅಭಿಮಾನಿಗಳು ಪ್ಲಾನ್ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ನಡುವೆ ಎಂಥಾ ಒಳ್ಳೆಯ ಸ್ನೇಹ ಸಂಬಂಧವಿತ್ತು. ಪುನೀತ್ ತೀರಿಕೊಂಡಾಗ ಸುದೀಪ್ ಕಣ್ಣೀರು ಹಾಕಿದ್ದರು.