ವ್ಯಕ್ತಿಪೂಜೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ- ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಡಿ.ಕೆ ಶಿವಕುಮಾರ್ ಪರೋಕ್ಷ ಟಾಂಗ್. ಬೆಂಗಳೂರು,ಜುಲೈ,23,2022(..)ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಫೈಟ್ ತಾರಕಕ್ಕೇರಿದ್ದು, ಈ ಮಧ್ಯೆ ಸಿದ್ಧರಾಮಯ್ಯ ಮುಂದಿನ ಸಿಎಂ ಆಗಬೇಕು ಎಂದು ಹೇಳಿಕೆ ನೀಡಿದ್ಧ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷ ಟಾಂಗ್ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಡಿ.ಕೆ ಶಿವಕುಮಾರ್, ನನ್ನ ಲೆವೆಲ್ ಗೆ ಮಾತನಾಡೋರು ಇದ್ದರೇ ಮಾತನಾಡುತ್ತೇನೆ. ಎಲ್ಲರೂ ಬಾಯಿ ಮುಚ್ಚುಕೊಂಡು ಕೆಲಸ ಮಾಡಬೇಕು. ಪಕ್ಷವನ್ನ ಅಧಿಕಾರಕ್ಕೆ ತರುವ ಕೆಲಸ ಮಾಡಿ. ಪಕ್ಷಕ್ಕೆ ನಿಮ್ಮ ಸಮುದಾಯದವರನ್ನ ಸೆಳೆಯಿರಿ. ವ್ಯಕ್ತಿ ಪೂಜೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಶಾಸಕ ಜಮೀರ್ ಗೆ ಕುಟುಕಿದ್ದಾರೆ. ಎಲ್ಲರೂ ಕೂಡ ಸಿಎಂ ಅಭ್ಯರ್ಥಿಯೇ ಸದ್ಯಕ್ಕೆ ಯಾವುದೇ ಹುದ್ದೆ ಖಾಲಿ ಇಲ್ಲ. ಎಲ್ಲಾ ಶಾಸಕರೂ ಕೂಡ ಸಿಎಂ ಅಭ್ಯರ್ಥಿಯೇ..? ನನ್ನ ಸಮನಾಗಿ ಮಾತನಾಡುವವರು ಇದ್ದರೇ ಮಾತನಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. : - –- - – - .