ಈಶ್ವರಪ್ಪ ಮಾಡಿದ ಭ್ರಷ್ಟಾಚಾರಗಳಿಗೆ ಅಂಡಮಾನ್ ಜೈಲಿಗೆ ಕಳಿಸಬೇಕು-ಬಿಕೆ ಹರಿಪ್ರಸಾದ್ ವಾಗ್ದಾಳಿ. ಉತ್ತರ ಕನ್ನಡ,ಜುಲೈ,22,2022(..):ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಿರುವ ವಿಚಾರ ಕುರಿತು ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿರುವ ಬಿ.ಕೆ ಹರಿಪ್ರಸಾದ್, ಈಶ್ವರಪ್ಪ ಅಪರಾಧಿಯಾಗುವಂತಹ ಪ್ರಸಂಗ ಇಲ್ಲ. ಸಂತೋಷ್ ಸಾವನ್ನಪ್ಪಿದಾಗಲೇ ಈಶ್ವರಪ್ಪ ನಿರ್ದೋಶಿ ಎಂದು ಸಿಎಂ ಹಾಗೂ ಕೆಲ ಸ್ವಾಮೀಜಿಗಳು ಹೇಳಿದ್ದರು. ಈಶ್ವರಪ್ಪ ಅಪರಾಧಗಳ ರಾಜ. ಈಶ್ವರಪ್ಪ ಮಾಡಿದ ಬ್ರಷ್ಟಾಚಾರಗಳಿಗೆ ಅಂಡಮಾನ್ ಜೈಲಿಗೆ ಕಳುಹಿಸಬೇಕು. ಆದರೆ ಸರ್ಕಾರ ನಿರ್ದೋಶಿ ಎಂದು ಬಿ ರಿಪೋರ್ಟ್ ಕೊಟ್ಟಿದೆ ಇದು ಸರ್ಕಾರ ಕಾರ್ಯವೈಖರಿ ಎತ್ತಿ ತೋರಿಸುತ್ತೆ ಎಂದು ಟೀಕಿಸಿದರು. : – – -