ಪ್ರಧಾನಿ ಮೋದಿ ಜನರ ಭಾವನೆಗೆ ಸ್ಪಂದಿಸುತ್ತಾರೆ: ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ. ಮೈಸೂರು,ಜುಲೈ,20,2022(..):ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಸಂಬಂಧ, ಪ್ರಧಾನಿ ಮೋದಿ ಜನರ ಭಾವನೆಗೆ ಸ್ಪಂದಿಸುತ್ತಾರೆ. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಇಂದು ಜಿಎಸ್ ಟಿ ಸಂಬಂಧ ಸಭೆ ನಡೆಯಲಿದೆ. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು. ನಮ್ಮ ಪ್ರಧಾನಿ ತಾಯಿ ಹೃದಯದವರು. ಅವರಿಗೆ ಜನರ ಭಾವನೆ ಅರ್ಥವಾಗುತ್ತೆ ಎಂದರು. ರಾಜ್ಯದ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರದ ಕೈ ಸೇರಿಲ್ಲ. ನೆರೆ ಸಂಪೂರ್ಣ ತಗ್ಗಿದ ಮೇಲೆ ನಷ್ಟದ ಬಗ್ಗೆ ಗೊತ್ತಾಗುತ್ತೆ ಪ್ರವಾಹ ತಗ್ಗುವವರೆಗೂ ಹಾನಿ ಬಗ್ಗೆ ತಿಳಿಯಲ್ಲ. ರಸ್ತೆ ಸೇತುವೆ ಹಾನಿ ಬಗ್ಗೆ ಮಾತ್ರ ವರದಿ ತಯಾರಾಗುತ್ತಿದೆ ಪ್ರವಾಹದಿಂದ ನನ್ನ ಜಿಲ್ಲೆಯಲ್ಲೂ ಸಹ ಸಾಕಷ್ಟು ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು. : - – - - - .