ಜುಲೈ 20ರಂದು ಕಬಿನಿ, ಕೆಆರ್ ಎಸ್ ಜಲಾಶಯಗಳಿಗೆ ಸಿಎಂ ಬೊಮ್ಮಾಯಿ ಬಾಗೀನ ಅರ್ಪಣೆ. ಬೆಂಗಳೂರು,ಜುಲೈ,18,2022(..):ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಬಿನಿ, ಕೆ ಆರ್.ಎಸ್ ಜಲಾಶಯಗಳು ಭರ್ತಿಯಾಗಿದ್ದು ಈ ಹಿನ್ನಲೆಯಲ್ಲಿ ಜಲಾಶಯಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಬಾಗೀನ ಅರ್ಪಣೆ ಕಾರ್ಯಕ್ರಮ ನಿಗದಿಯಾಗಿದೆ. ಸಿ.ಎಂ ಮೈಸೂರು ಮತ್ತು ಮಂಡ್ಯ ಜಿಲ್ಲಾ ಪ್ರವಾಸದ ವೇಳಾ ಪಟ್ಟಿ ಪ್ರಕಟಗೊಂಡಿದ್ದು, ಜುಲೈ 20 ರಂದು ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಸಿ.ಎಂ ಬಸವರಾಜ ಬೊಮ್ಮಾಯಿ ಬಾಗೀನ ಅರ್ಪಣೆ ಮಾಡಲಿದ್ದಾರೆ. ಜುಲೈ 20 ರಂದು ಬೆಳಗ್ಗೆ 9:30ಕ್ಕೆ ಮೈಸೂರಿಗೆ ಆಗಮಿಸಲಿರುವ ಸಿಎಂ ಬೊಮ್ಮಾಯಿ 9:45 ಕ್ಕೆ ಚಾಮುಂಡಿ ತಾಯಿಯ ದರ್ಶನ ಪಡೆಯಲಿದ್ದಾರೆ. ನಂತರ ಹೆಲಿಕ್ಯಾಪ್ಟರ್ ಮೂಲಕ ಕಬಿನಿ ಜಲಾಶಯಕ್ಕೆ ಪ್ರಯಾಣ ಬೆಳೆಸಲಿರುವ ಸಿಎಂ ಬೊಮ್ಮಾಯಿ, ಸುಮಾರು 11:30ಕ್ಕೆ ಜಲಾಶಯಲಕ್ಕೆ ಬಾಗೀನ ಅರ್ಪಣೆ ಮಾಡಲಿದ್ದಾರೆ. ಕಬಿನಿ ನಂತರ ಕೆ.ಆರ್.ಎಸ್ ಆಗಮಿಸಿ ಈ ಜಲಾಶಯಕ್ಕೂ ಬಾಗೀನ ಆರ್ಪಿಸಲಿದ್ದಾರೆ. : 20- ---