ಅದ್ದೂರಿ ದಸರಾಗೆ ಸಿದ್ಧತೆ: ಅಭಿಮನ್ಯುಗೆ ಅಂಬಾರಿ ಹೊರುವ ಹೊಣೆ ಬೆಂಗಳೂರು, ಜುಲೈ 17, 2022 (..):ಈ ಬಾರಿ ಅದ್ದೂರಿ ದಸರಾಗೆ ರಾಜ್ಯ ಸರ್ಕಾರದಿಂದ ಸಿದ್ದತೆ ನಡೆದಿದೆ. ಎರಡು ವರ್ಷಗಳ ಬಳಿಕ ಅದ್ದೂರಿ ದಸರಾಗೆ ಸರ್ಕಾರ ಸಜ್ಜಾಗುತ್ತಿದೆ. ಕೊಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಹೆಗಲಿಗೆ ಚಿನ್ನದ ಅಂಬಾರಿ ಹೊರುವ ಹೊಣೆ ನೀಡಲು ನಿರ್ಧರಿಸಲಾಗಿದೆ. ದಸರಾ ಆನೆಗಳ ಕುರಿತು ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಉನ್ನತ ಸಮಿತಿ ಸಭೆಯಲ್ಲಿ ಈ ಅಧಿಕೃತ ಘೋಷಣೆ ಮಾಡಲಾಗಿದೆ. ಜು.19 ರಂದು ನಡೆಯುವ ದಸರಾ ಉನ್ನತ ಮಟ್ಟದ ಸಭೆ. ನಾಲ್ಕು ಕ್ಯಾಂಪ್ ಗಳಲ್ಲಿ ಆನೆಗಳ ಆಯ್ಕೆ ಅಂತಿಮ ಮಾಡಲಾಗುತ್ತದೆ. ಈ ಬಾರಿ ದಸರಾದಲ್ಲಿ 20 ಅನೆಗಳು ಭಾಗಿಯಾಗಲಿವೆ.