ಕಚೇರಿಯಲ್ಲಿ ಚಿತ್ರೀಕರಣ ನಿಷೇಧ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ: ಹಿಂದಿನ ನಿಯಮವೇ ಜಾರಿ- ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ಜುಲೈ,16,2022(..):ಸರ್ಕಾರಿ ಕಚೇರಿಗಳಲ್ಲಿ ಪೋಟೊ, ವಿಡಿಯೋ ಚಿತ್ರೀಕರಣ ನಿಷೇಧದ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಇದೀಗ ಆದೇಶ ವಾಪಸ್ ಪಡೆಯಲಾಗಿದ್ದು ಹಿಂದಿನ ನಿಯಮವೇ ಜಾರಿಯಲ್ಲಿರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸರ್ಕಾರಿ ಕಚೇರಿಯಲ್ಲಿ ಚಿತ್ರೀಕರಣ ನಿಷೇಧ ವಾಪಸ್ ಪಡೆಯಲಾಗಿದೆ. ಹೆಣ್ಣುಮಕ್ಕಳ ಪೋಟೋ ವಿಡಿಯೋ ಮಾಡ್ತಾರೆ. ಪೋಟೋ ವಿಡಿಯೋ ಚಿತ್ರೀಕರಣ ಬಂದ್ ಮಾಡಿ ಅಂತಾ ನೌಕರರು ಮನವಿ ಮಾಡಿದ್ದರು. ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ರೀತಿ ನಿರ್ಬಂಧ ಹಾಕಬಾರದು ಹಿಂದಿನ ನಿಯಮವೇ ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು. ಹಲವೆಡೆ ಮಳೆ ಹಾನ ಹಿನ್ನೆಲೆ ನಿನ್ನೆ ಡಿಸಿಗಳ ಜತೆ ಚರ್ಚಸಿದ್ದೇನೆ. ಮಳೆಗೆ ಮನೆ ಹಾನಿಯಾಗಿದ್ದರೇ ತಕ್ಷಣ ಪರಿಹಾರ ನೀಡಲಾಗುತ್ತದೆ. ಮೂಲ ಸೌಕರ್ಯಕ್ಕೆ 500 ಕೋಟಿ ಒದಗಿಸಿದ್ದೇನೆ. ಸಂತ್ರಸ್ಥರ ನೆರವಿಗೆ ನಮ್ಮ ಸರ್ಕಾರ ಧಾವಿಸಲಿದೆ ಎಂದರು. : –----- . … , . : – , 16, 2022 (..): . “ , ,” . , . “ . , ,” . , . “ . 500 . ,” .: / , / /