ಬ್ರಾಂಡೆಡ್ ಆಹಾರ ಪದಾರ್ಥಗಳ ಮೇಲೆ ದರ ಏರಿಕೆಗೆ ಖಂಡನೆ: ಮೈಸೂರಿನ ಮಾರುಕಟ್ಟೆ ಸಂಪೂರ್ಣ ಬಂದ್…. ಮೈಸೂರು,ಜುಲೈ,15,2022(..): ಬ್ರಾಂಡೆಡ್ ಆಹಾರ ಪದಾರ್ಥಗಳ ಮೇಲೆ ದರ ಏರಿಕೆ, ಸರ್ಕಾರದ ನೀತಿಯನ್ನು ವಿರೋಧಿಸಿ ಮೈಸೂರಿನ ಮಾರುಕಟ್ಟೆ ಸಂಪೂರ್ಣ ಬಂದ್ ,ಮಾಡಲಾಗಿದೆ. ತಮ್ಮ ಅಂಗಡಿ ಮುಂಗಟ್ಟಗಳಿಗೆ ಬೀಗ ಜಡಿದ ವರ್ತಕರು. ಮೈಸೂರಿನ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿದೆ. ಸದಾ ಜನಜಂಗುಳಿಯಿಂದಿದ್ದ ಮಾರುಕಟ್ಟೆ ಸದ್ಯ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಬ್ರಾಂಡೆಡ್ ಆಹಾರ ಪದಾರ್ಥಗಳ ಮೇಲೆ 5% ಹೆಚ್ಚಳ, ಏರಿಕೆಯನ್ನ ಕೂಡಲೇ ವಾಪಸ್ ಪಡೆಯಬೇಕೆಂದು ವರ್ತಕರು ಆಗ್ರಹಿಸಿದ್ದಾರೆ.