ಶಾಂತಿ ಬೇಕಾದರೇ ನೀವು ರಾಜ್ಯದ ಸಿಎಂ ಕೇಳಬೇಕು: ಸಿದ‍್ಧರಾಮಯ್ಯ ಕಾರಿಗೆ ಹಣ ಎಸೆದ ಮಹಿಳೆಗೆ ಕಿವಿಮಾತು, ಸರ್ಕಾರಕ್ಕೆ ಡಿಕೆ ಶಿವಕುಮಾರ್ ಟಾಂಗ್. ಮೈಸೂರು,ಜುಲೈ,15,2022(..):ಸಿದ್ಧರಾಮಯ್ಯ ನೀಡಿದ್ಧ ಪರಿಹಾರ ಹಣವನ್ನ ಮಹಿಳೆ ನಿರಾಕರಿಸಿ ವಾಪಸ್ ಕಾರಿಗೆ ಎಸೆದ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿರುವ ಡಿ.ಕೆ ಶಿವಕುಮಾರ್, ಶಾಂತಿ ಬೇಕಾದರೇ ನೀವು ರಾಜ್ಯದ ಸಿಎಂ ಕೇಳಬೇಕು. ಶಾಂತಿ ಕದಡುವವರಿಗೆ ನೀವು ಈ ಪ್ರಶ್ನೆ ಮಾಡಬೇಕು ಎಂದು ಮಹಿಳೆಗೆ ಕಿವಿಮಾತು ಹೇಳಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ. ಅಲ್ಲಿನ ಜನ ನೆಮ್ಮದಿ ರಕ್ಷಣೆ ಕೇಳಿದ್ರಲ್ಲಿ ತಪ್ಪಿಲ್ಲ. ಸರ್ವಜನಾಂಗದ ಶಾಂತಿಯ ತೋಟ ನಮ್ಮದು. ಅರ್ಜಿ ಹಾಕಿಕೊಂಡು ಯಾರು ಯಾವ ಜಾತಿಯಲ್ಲಿ ಹುಟ್ಟಲ್ಲ. ನಾಯಕತ್ವ ವಹಿಸಿಕೊಂಡಿರುವ ಸರ್ಕಾರ ಕಾಳಜಿ ವಹಿಸಲಿ. ರಾಜ್ಯದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಸರ್ಕಾರದ್ದು ಎಂದು ಹೇಳಿದರು. : – – - - –