ಮತ್ತೆ ಕೋಟ್ಯಾಧೀಶನಾದ ಮಲೆ ಮಾದಪ್ಪ: ಆದಾಯದಲ್ಲೂ ಗಣನೀಯ ಏರಿಕೆ. ಚಾಮರಾಜನಗರ,ಜುಲೈ,15,2022(..):ರಾಜ್ಯದ ಪ್ರಮುಖ ಧಾರ್ಮಿಕ ಯಾತ್ರಾಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದ ಮಾಸಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಕೋಟ್ಯಾಂತರ ರೂಪಾಯಿ ಸಂಗ್ರಹವಾಗಿದ್ದು, ಈ ಮೂಲಕ ಮಲೆ ಮಾದಪ್ಪ ಮತ್ತೆ ಕೋಟ್ಯಾಧೀಶನಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟ ರಾಜ್ಯದ 2ನೇ ಶ್ರೀಮಂತ ದೇವಾಲಯ ಎಂದು ಹೆಸರುವಾಸಿಯಾಗಿದೆ. ಮಲೆ ಮಹದೇಶ್ವರ ಪ್ರಾಧಿಕಾರದ ಆಡಳಿತ ವರ್ಗದ ಸಿಬ್ಬಂದಿಗಳು ನಿನ್ನೆ ಬೆಳಿಗ್ಗೆಯಿಂದ ರಾತ್ರಿವರೆಗೂ ಮಾದಪ್ಪನ ಹುಂಡಿ ಹಣ ಎಣಿಕೆ ಕಾರ್ಯ ನಡೆಸಿದ್ದು, ಸರಿ ಸುಮಾರು ಒಂದು ಮುಕ್ಕಾಲು ಕೋಟಿ ನಗದು ಹಣ ಸಂಗ್ರಹವಾಗಿದೆ. 1,70,65,814 ರೂ ನಗದು, 80 ಗ್ರಾಂ ಚಿನ್ನ, 1.4 ಬೆಳ್ಳಿ ಮಾದಪ್ಪನ ಹುಂಡಿಗೆ ಹರಿದು ಬಂದಿದ್ದು, ಕೊರೋನಾ ಬಳಿಕ ಗಣನೀಯ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿರುವ ಹಿನ್ನೆಲೆಮಲೆ ಮಾದಪ್ಪನ ಆದಾಯದಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ. ವಾರ್ಷಿಕವಾಗಿ ಎಲ್ಲಾ ಮೂಲಗಳಿಂದ 70 ರಿಂದ 80 ಕೋಟಿ ಆದಾಯ ಬರುವ ಯಾತ್ರಾಸ್ಥಳ ಇದಾಗಿದೆ. : - -