ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ. ಮುಂಬೈ,ಜುಲೈ,14,2022(..):ಇತ್ತೀಷೆಗಷ್ಟೆ ಬಿಜೆಪಿ ಬೆಂಬಲದೊಂದಿಗೆ ಮಹಾರಾಷ್ಟ್ರ ಸಿಎಂ ಆಗಿರುವ ಏಕನಾಥ್ ಸಿಂಧೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವ ಮೂಲಕ ಅಲ್ಲಿನ ಜನರಿಗೆ ಕೊಡುಗೆ ನೀಡಿದ್ದಾರೆ. ಪೆಟ್ರೋಲ್ ಲೀಟರ್ ಗೆ 5 ಮತ್ತು ಡೀಸೆಲ್ ಲೀಟರ್ ಗೆ 3 ರೂ ಕಡಿತ ಮಾಡಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಏಕನಾಥ್ ಶಿಂಧೆ ಈ ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರದ ಜನರಿಗೆ ಇದೊಂದು ದೊಡ್ಡ ನೆಮ್ಮದಿ ಎಂದು ಶಿಂಧೆಯವರ ಘೋಷಣೆಯನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶ್ಲಾಘಿಸಿದ್ದಾರೆ. ಏಕನಾಥ ಶಿಂಧೆ ಅವರ ನೂತನ ಸರ್ಕಾರ ಪೆಟ್ರೋಲ್ ಲೀಟರ್ ಗೆ 5 ಮತ್ತು ಡೀಸೆಲ್ ಲೀಟರ್ ಗೆ 3 ರೂ ಕಡಿತ ಮಾಡಲು ನಿರ್ಧರಿಸಿದೆ ಎಂದು ಟ್ವೀಟ್ ಮಾಡಿರುವ ದೇವೆಂದ್ರ ಫಡ್ನಾವಿಸ್, ಈ ನಿರ್ಧಾರದಿಂದಾಗಿ ರಾಜ್ಯ 6,000ಕೋಟಿ ಹೆಚ್ಚುವರಿ ಹೊರೆಯನ್ನು ಹೊರಲಿದೆ ಎಂದಿದ್ದಾರೆ. ಬೆಲೆ ಕಡಿಮೆ ಆದ ನಂತರ ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ​​ಗೆ 106.35 ರೂ, ಡೀಸೆಲ್ ಬೆಲೆ 94.28 ರೂ.ಆಗಿದೆ. : – -- -.