ಪಂದ್ಯಾವಳಿ ವೇಳೆ ಮೈಸೂರಿನ ಕಿಕ್ ಬಾಕ್ಸರ್ ಸಾವು. ಬೆಂಗಳೂರು,ಜುಲೈ,14,2022(..):ಬೆಂಗಳೂರಿನಲ್ಲಿ ಪಂದ್ಯಾವಳಿ ವೇಳೆ ಮೈಸೂರಿನ ಕಿಕ್ ಬಾಕ್ಸರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಿಕ್ ಬಾಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದ ಮೈಸೂರು ಯುವಕ‌ ನಿಖಿಲ್ (24) ಸಾವನ್ನಪ್ಪಿದ್ದಾರೆ. ಜುಲೈ 10 ರಂದು ಈ ಘಟನೆ ನಡೆದಿದೆ. ಬೆಂಗಳೂರಿನ ಕೆಂಗೇರಿಯಲ್ಲಿ 1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಕಿಕ್ ಬಾಕ್ಸಿಂಗ್ ಸ್ಪರ್ಧೆ ಆಯೋಜನೆಗೊಂಡಿತ್ತು. ಯುವಕ‌ ನಿಖಿಲ್ ರಿಂಗ್‌ ನಲ್ಲಿ ಸೆಣೆಸಾಡುತ್ತಿದ್ದಂತೆ ಎದುರಾಳು ಏಟಿಗೆ ಸಾವನ್ನಪ್ಪಿದ್ದಾರೆ. ಎದುರಾಳಿ ತಲೆಗೆ ಹೊಡೆದ ಒಂದೇ ಏಟಿಗೆ ನಿಖಿಲ್ ಬಾಕ್ಸಿಂಗ್ ರಿಂಗ್ ನಲ್ಲಿ ಕೆಳಗೆ ಬಿದ್ದಿದ್ದು, ನಿಖಿಲ್ ಕೆಳಗೆ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ತಕ್ಷಣ ನಿಖಿಲ್ ರನ್ನ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರೆಡು ದಿನಗಳ ಕಾಲ‌ ಕೋಮಾದಲ್ಲಿದ್ದ ನಿಖಿಲ್. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ನಿಖಿಲ್ ತಂದೆ ಬಾಕ್ಸರ್ ಆಗಿದ್ರು. ಇನ್ನು ನಿಖಿಲ್ ಕಿಕ್ ಬಾಕ್ಸಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡಬೇಕೆಂದುಕೊಂಡಿದ್ದರು ಎನ್ನಲಾಗಿದೆ. : –- – . … , 14, 2022 (..): . (24) . 10. K1 . . . . , . , ’ . ’ , . - .: / / /