ಸಿದ್ಧರಾಮೋತ್ಸವ ಆಯ್ತು ಇದೀಗ ಶಿವಕುಮಾರೋತ್ಸವ ಮಾಡುವಂತೆ ಡಿಕೆಶಿ ಬೆಂಬಲಿಗರಿಂದ ಪತ್ರ. ಬೆಂಗಳೂರು,ಜುಲೈ,13,2022(..):ವಿಪಕ್ಷ ನಾಯಕ ಸಿದ್ದರಾಮಯ್ಯಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರ 75ನೇ ಅಮೃತ ಮಹೋತ್ಸವವನ್ನು ಆಚರಿಸಲು ಅವರ ಅಭಿಮಾನಿಗಳು, ಬೆಂಬಲಿಗರು ಮುಂದಾಗಿದ್ದು ಈ ಬೆನ್ನಲ್ಲೆ ಇದೀಗ ಶಿವಕುಮಾರೋತ್ಸವ ಮಾಡುವಂತೆ ಡಿ.ಕೆ ಶಿವಕುಮಾರ್ ಬೆಂಬಲಿಗರೊಬ್ಬರು ಬಹಿರಂಗ ಪತ್ರ ಬರೆದಿದ್ದಾರೆ. ಶಿವಕುಮಾರೋತ್ಸವ ಮಾಡುವಂತೆ ಕೆಪಿಸಿಸಿ ಮಾಧ್ಯಮ‌ ವಿಭಾಗದ ಸಂಯೋಜಕ ಜಿ.ಸಿ.ರಾಜು ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯರ 75ನೇ ಅಮೃತ ಸಮಿತಿಯಿಂದ ಕಾರ್ಯಕ್ರಮ ನಡೆಯುತ್ತಿದ್ದು, ಅದೇ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದ್ದು, ಇಂದು ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವಂತೆ ಮನವಿ ಮಾಡಿದ್ದಾರೆ. ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ದುಡಿದವರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಶಿವಕುಮಾರೋತ್ಸವ ಬಗ್ಗೆ ಚರ್ಚಿಸಿ ಎಂದು ಜೆಸಿ ರಾಜು ಮನವಿ ಮಾಡಿದ್ದಾರೆ. ಈ ಬಗ್ಗೆ ಸೋನಿಯಾ, ರಾಹುಲ್ ಸೇರಿ ಹಿರಿಯ ನಾಯಕರಿಗೂ ಮನವಿ ಮಾಡಿದ್ದಾರೆ ಎನ್ನಲಾಗಿದೆ. : -- - -.