ಮೈಸೂರಿನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಇಬ್ಬರು ಸಾವು. ಮೈಸೂರು,ಜುಲೈ,11,2022(..):ಮೈಸೂರಿನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಹುಣಸೂರು ತಾಲ್ಲೂಕು ಬಿಳಿಕೆರೆ ಬಳಿ ಈ ಅಪಘಾತ ಸಂಭವಿಸಿದೆ. ವಿನೋದ್ ಕುಮಾರ್ ಮತ್ತು ಕ್ಯಾಂಟಿನ್ ಮೋಹನ್ ಮೃತ ದುರ್ದೈವಿಗಳು.ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತಪಟ್ಟವರು ಬೈಲುಕುಪ್ಪೆ ಮೂಲದವರು ಎಂದು ತಿಳಿದು ಬಂದಿದೆ. ಮೈಸೂರಿನಿಂದ ಬೈಲು ಕುಪ್ಪೆಗೆ ಕಾರಿನಲ್ಲಿ ಕುಟುಂಬ ತೆರಳುತ್ತಿತ್ತು. ಹುಣಸೂರು ಕಡೆಯಿಂದ ಮೈಸೂರು ಕಡೆಗೆ ಇನ್ನೋವಾ ಕಾರು ಹೋಗುತ್ತಿತ್ತು. ಈ ವೇಳೆ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : -- -.