ಸಿಎಂ ಪತ್ನಿ ಹೆಸರಿನಲ್ಲಿರುವ ಜಮೀನು ನಮ್ಮದು, ಸೂಕ್ತ ನ್ಯಾಯ ಒದಗಿಸಿ: ಮೈಸೂರು ಡಿಸಿಗೆ ಮನವಿ ಮೈಸೂರು,ಜುಲೈ,20,2024 (..):ಮುಡಾ 50:50 ಹಗರಣ ಪ್ರಕರಣ ಸಂಬಂಧ, ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿರುವ ಜಮೀನು ನಮ್ಮದು, ನಮಗೆ ಸೂಕ್ತ ನ್ಯಾಯ ಒದಗಿಸಿ ಎಂದು ಮೈಸೂರು ಜಿಲ್ಲಾಧಿಕಾರಿಗೆ ಇದೀಗ ಮನವಿ ಸಲ್ಲಿಕೆಯಾಗಿದೆ. ಈ ಸಂಬಂಧ ಚಿಕ್ಕಪ್ಪನ ವಿರುದ್ಧವೇ ದೊಡ್ಡಪ್ಪನ ಮಕ್ಕಳು ದೂರು ನೀಡಿದ್ದಾರೆ. ಜಮೀನಿನ ಮೂಲ ಮಾಲೀಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮೋಸದಿಂದ ನಮ್ಮ ಜಮೀನನ್ನ ಚಿಕ್ಕಪ್ಪ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಮಲ್ಲಯ್ಯನ ಮಗ ಜವರಯ್ಯರಿಂದ ದೂರು ಸಲ್ಲಿಕೆಯಾಗಿದೆ. ಹಾಗೆಯೇ ಮೈಲಾರಯ್ಯ ಪುತ್ರ ಮಂಜುನಾಥ್ ಅವರಿಂದ ಮತ್ತೊಂದು ದೂರು ಸಲ್ಲಿಸಲಾಗಿದೆ. ಬಿಜೆಪಿ ನಾಯಕರಾದ ಎನ್.ಮಹೇಶ್, ಶಾಸಕ ಶ್ರೀವತ್ಸ ಜೊತೆಗೂಡಿ ಜವರಯ್ಯ ಹಾಗೂ ಮಂಜುನಾಥ್ ಮನವಿ ಪತ್ರ ನೀಡಿದ್ದಾರೆ. ಡಿಸಿ ಇಲ್ಲದಿದ್ದ ಕಾರಣ ಅಪರ ಜಿಲ್ಲಧಿಕಾರಿ ಶಿವರಾಜ್ ಗೆ ಮನವಿ ಸಲ್ಲಿಸಿದ್ದು, ಮನವಿಯನ್ನ ಅಪರ ಜಿಲ್ಲಾಧಿಕಾರಿ ಶಿವರಾಜ್ ಸ್ವೀಕರಿಸಿದ್ದಾರೆ. ನಮ್ಮ ಚಿಕ್ಕಪ್ಪ ನಮಗೆ ಮೋಸ ಮಾಡಿದ್ದಾರೆ. ನಮಗೆ ಅನ್ಯಾಯ ಮಾಡಿ ನಮ್ಮ ಜಮೀನನ್ನ ಮಾರಾಟ ಮಾಡಿದ್ದಾರೆ. ಸಿಎಂ ಪತ್ನಿ ಹೆಸರಿನಲ್ಲಿರುವ ಜಮೀನು ನಮ್ಮದು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಅಲ್ಲದೆ ಸೂಕ್ತ ನ್ಯಾಯ ಒದಗಿಸಿ ಎಂದು ಜವರಯ್ಯ ಹಾಗೂ ಮಂಜುನಾಥ್ ಮನವಿ ಮಾಡಿದ್ದಾರೆ. : , ’ , , ,