ಏಷ್ಯಾ ಕಪ್ ಟಿ-20 ಕ್ರಿಕೆಟ್: ಭಾರತ-ಪಾಕ್ ಬಿಗ್ ಫೈಟ್’ಗೆ ವೇದಿಕೆ ! ಬೆಂಗಳೂರು, ಜುಲೈ 07, 2022 (..):ಏಷ್ಯಾ ಕಪ್ ನಡೆಸಲು ಏಷ್ಯನ್ ಕ್ರಿಕೆಟ್ ಅಸೋಷಿಯೇಷನ್ ಮುಂದಾಗಿದೆ. ಅದರಂತೆ ಟಿ20 ವಿಶ್ವಕಪ್​ಗೂ ಮುನ್ನವೇ ಏಷ್ಯಾಕಪ್ ನಡೆಯಲಿದೆ. ಈ ಬಾರಿ ಏಷ್ಯಾಕಪ್​ ಟಿ20 ಮಾದರಿಯಲ್ಲಿ ನಡೆಯಲಿದೆ. ಇದರಲ್ಲಿ ಭಾರತ ತಂಡವು ಪಾಕಿಸ್ತಾನ್ ದ ವಿರುದ್ದ ಸೆಣೆಸಾಡಲಿದೆ. ಇಲ್ಲಿ ಪಾಕಿಸ್ತಾನದ ವಿರುದ್ದ ಟಿ20 ವಿಶ್ವಕಪ್​ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಭಾರತ-ಪಾಕ್ ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯದ ಕಾರಣ, ಮತ್ತೊಮ್ಮೆ ಮುಖಾಮುಖಿಗೆ ಐಸಿಸಿ ಟಿ20 ವಿಶ್ವಕಪ್​ ತನಕ ಕಾಯಲೇಬೇಕಿತ್ತು. ಇದೀಗ ಏಷ್ಯಾ ಕಪ್ ನಲ್ಲಿ ಅದಕ್ಕೆ ವೇದಿಕೆ ಸಿಗಲಿದೆ. ಈ ಬಾರಿ ಟೂರ್ನಿಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಯೋಜಿಸಲಿದ್ದು, ಅದರ ಮೊದಲ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಏಷ್ಯಾ ಕಪ್ ಟಿ20 ಟೂರ್ನಿ ಆಗಸ್ಟ್ 27ರಿಂದ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ.