ವಿಂಬಲ್ಡನ್ : ಮಿಶ್ರ ಡಬಲ್ಸ್ ಸೆಮಿಫೈನಲ್ ನಲ್ಲಿ ಸಾನಿಯಾ ಮಿರ್ಜಾ-ಮೇಟ್ ಪಾವಿಕ್ ಜೋಡಿಗೆ ಸೋಲು ನವದೆಹಲಿ,ಜುಲೈ,7,2022(..): ವಿಂಬಲ್ಡನ್ ಮಿಶ್ರ ಡಬಲ್ಸ್ ಸೆಮಿಫೈನಲ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಕ್ರೊವೇಷಿಯಾದ ಮೇಟ್ ಪಾವಿಕ್ ಜೋಡಿ ಸೋಲು ಅನುಭವಿಸಿದೆ. ಸಾನಿಯಾ ಮಿರ್ಜಾ ಮತ್ತು ಕ್ರೊವೇಷಿಯಾದ ಮೇಟ್ ಪಾವಿಕ್ ಜೋಡಿ 6-4,5-7,4-6 ಸೆಟ್ ಗಳಿಂದ ಹಾಲಿ ಚಾಂಪಿಯನ್ ನೀಲ್ ಸ್ಕುಪಿಸ್ಕಿ ಮತ್ತು ಡಿಸೈರಿ ಕ್ರಾವೆಸ್ಕಿ ಜೋಡಿ ವಿರುದ್ಧ ಆಘಾತ ಅನುಭವಿಸಿದರು. ವರ್ಷದ ಆರಂಭದಲ್ಲಿ ವೃತ್ತಿಪರ ಟೆನಿಸ್ ಗೆ ವಿದಾಯ ಘೋಷಿಸಿದ್ದ ಸಾನಿಯಾ ಮಿರ್ಜಾ ಈ ವರ್ಷ ಕೊನೆಯ ಬಾರಿ ಆಡಲಿದ್ದೇನೆ ಎಂದಿದ್ದರು. ವಿಂಬಲ್ಡನ್ ಫೈನಲ್ ಪ್ರವೇಶಿಸಲು ಸಾನಿಯಾ ಜೋಡಿ ಇನ್ನಿಲ್ಲದ ಹೋರಾಟ ನಡೆಸಿದರು. ಆದರೆ ಚಾಂಪಿಯನ್ ಜೋಡಿ ವಿರೋಚಿತ ಸೋಲುಂಡು ಟೂರ್ನಿಯಿಂದ ಹೊರಬಿದ್ದರು.