ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ ಯೋಜನೆ ಕೈ ಬಿಟ್ಟ ಸರ್ಕಾರ. ಮೈಸೂರು,ಜುಲೈ,6,2022(..):ಸ್ಥಳೀಯರು, ಪರಿಸರವಾದಿಗಳ ವಿರೋಧಕ್ಕೆ‌ ಮಣಿದ ರಾಜ್ಯ ಸರ್ಕಾರ ಇದೀಗ ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ ಯೋಜನೆಯನ್ನ ಕೈಬಿಟ್ಟಿದೆ. ರೋಪ್‌ ವೇ ಯೋಜನೆಯನ್ನ ಪ್ರವಾಸೋದ್ಯಮ ಇಲಾಖೆ ಕೈ ಬಿಟ್ಟಿದ್ದು, ಪ್ರವಾಸೋದ್ಯಮ ಅಭಿವೃದ್ದಿ ಕುರಿತ ಸಭೆ ಬಳಿಕ ಈ ವಿಚಾರವನ್ನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಈ ಬಗ್ಗೆ ಮಾತನಾಡಿದ ಅವರು, ಭಕ್ತರ, ಸ್ಥಳಿಯರ ಭಾವನೆಗಳಿಗಾಗಿ ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ಯೋಜನೆ ಕೈಬಿಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರಿಗಿಂತ ಭಕ್ತರು ಹೆಚ್ಚಾಗಿ ಬರ್ತಾರೆ. ಮೆಟ್ಟಿಲುಗಳ ಜೊತೆಗೆ ಹಲವಾರು ಕಡೆ ಬೆಟ್ಟಕ್ಕೆ ದಾರಿ ಇದೆ. ಹೆಚ್ಚು ಬಸ್‌ ಸೌಲಭ್ಯ ಇರುವುದರಿಂದ ಕೈ ಬಿಡಲಾಗಿದೆ‌. ಪ್ರವಾಸೋದ್ಯಮ ಅಭಿವೃದ್ಧಿಗಿಂತ ದೇವಾಲಯದ ಪ್ರಾಧಿಕಾರ ರಚನೆಗೆ ಚರ್ಚೆ ನಡೆಯಿತು. ಚಾಮುಂಡೇಶ್ವರಿ ದೇವಾಲಯದ ಪ್ರಾಧಿಕಾರದ ಬಗ್ಗೆ ಸಿಎಂ‌ ಜೊತೆ ಚರ್ಚೆ ಮಾಡುತ್ತೇನೆ. ದೇವಾಲಯದ ಸುತ್ತ ಅಂಗಡಿಗಳ ಬದಲಿ ಸ್ಥಳದ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ ಎಂದರು. ನಂದಿ ಮಾರ್ಗದ ರಸ್ತೆ ಮರು ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಭೂ ಕುಸಿತವಾದ ರಸ್ತೆಯ ನಿರ್ಮಾಣಕ್ಕೆ 10 ಕೋಟಿ ಬಿಡುಗಡೆಯಾಗಿದೆ. ಭೂ ಕುಸಿತದ ಶಾಶ್ವತ ಪರಿಹಾರಕ್ಕಾಗಿ ಯಾವ ತಂತ್ರಜ್ಞಾನದಲ್ಲಿ ನಿರ್ಮಿಸಬೇಕೆಂದು ಪಿಡಬ್ಲ್ಯೂಡಿ ಇಲಾಖೆ ಮಾಹಿತಿ ಪಡೆದಿದೆ.ಶೀಘ್ರದಲ್ಲೇ ಕುಸಿತವಾದ ರಸ್ತೆಯನ್ನ ಮರು ನಿರ್ಮಾಣ ಮಾಡ್ತೀವಿ ಎಂದರು. ಚಾಮುಂಡಿ ಬೆಟ್ಟದ ಮೇಲಿನ‌ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಚಾಮುಂಡಿ ಬೆಟ್ಟದ ಮೇಲೆ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಇನ್ನು ಮುಂದೆ ಅವಕಾಶ ನೀಡುವುದಿಲ್ಲ. ಬೆಟ್ಟದ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆಯಿದೆ. ನಾಲ್ಕೈದು ಎಕರೆ ಸರ್ಕಾರಿ ಜಾಗ ಗುರ್ತಿಸಿ, ಬೆಟ್ಟದ ಮೇಲಿನ ನಿವಾಸಿಗಳು ಅಲ್ಲಿ ವಾಸಿಸಲು ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು. : – - - - - . … . , 6, 2022 (..): , . , - .. . “ , . , . . . , . ’ . . ,” . , . 10 . “ . ,” . . “ . . ,” .: - / .. / / /