ಚಾಕುವಿನಿಂದ ಇರಿದು ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ. ಹುಬ್ಬಳ್ಳಿ,ಜುಲೈ,5,2022(..):ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನ ಹತ್ಯೆ ಮಾಡಿರುವ ಘಟನೆ ಇಂದು ನಡೆದಿದೆ. ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಖಾಸಗಿ ಹೋಟೆಲ್ ನ ರಿಸೆಪ್ಷನ್ ನಲ್ಲೇ ಕಾಲಿಗೆ ಬೀಳುವ ನೆಪದಲ್ಲಿ ಚಂದ್ರಶೇಖರ್ ಗುರೂಜಿ ಅವರಿಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಚಾಕು ಇರಿತಕ್ಕೊಳಗಾದ ಚಂದ್ರಶೇಖರ್ ಗುರೂಜಿ ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಕಮೀಷನರ್ ಲಾಬೂರಾಮ್ ದೌಡಾಯಿಸಿದ್ದು, ಚಂದ್ರಶೇಖರ್ ಗುರೂಜಿ ಅವರ ಮೃತದೇಹವನ್ನ ಕಿಮ್ಸ್ ಗೆ ರವಾನೆ ಮಾಡಲಾಗಿದೆ. ಸರಳವಾಸ್ತು, ವಾಸ್ತು ಪರಿಹಾರದ ಸಲಹೆ ಮೂಲಕ ಚಂದ್ರಶೇಖರ್ ಗುರೂಜಿ ಖ್ಯಾತರಾಗಿದ್ದರು. : – - -. .. , 5, 2022 (..): . . , . - . .: / /