‘ಲಾಠಿ’ ಚಿತ್ರೀಕರಣದ ವೇಳೆ ಮತ್ತೆ ಗಾಯಗೊಂಡ ನಟ ವಿಶಾಲ್ ಬೆಂಗಳೂರು, ಜುಲೈ 05, 2022 (..): ತಮಿಳು ನಟ ವಿಶಾಲ್ ಡ್ಯೂಪ್ ಇಲ್ಲದೇ ಶೂಟ್ ಮಾಡಲು ಹೋಗಿ ಗಾಯಗೊಂಡು ಚಿತ್ರದ ಶೂಟಿಂಗ್‌ ಸ್ಥಗಿತಗೊಂಡಿದೆ. ಸದ್ಯ ವಿಶಾಲ್ ಲಾಠಿ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು,ಈ ವೇಳೆ ವಿಶಾಲ್ ಗಾಯಗೊಂಡಿದ್ದಾರೆ. ಈ ಹಿಂದೆಯೂ ಇದೇ ಚಿತ್ರೀಕರಣದ ವೇಳೆ ಗಾಯಗೊಂಡ ಹಿನ್ನೆಲೆಯಲ್ಲಿಕೆಲ ದಿನಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು. ಬಳಿಕ ಇದೇ ಚಿತ್ರದ ಶೂಟಿಂಗ್ ವೇಳೆ ವಿಶಾಲ್ ಮತ್ತೊಮ್ಮೆ ಗಂಭೀರವಾಗಿ ಗಾಯಗೊಂಡಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ದೃಶ್ಯಗಳ ಚಿತ್ರೀಕರಣದ ವೇಳೆ ಅಪಘಾತದಲ್ಲಿ ವಿಶಾಲ್ ಗಾಯಗೊಂಡಿದ್ದರಿಂದ ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗಿದೆ. ಚಿತ್ರತಂಡ ಈ ವಿಷಯವನ್ನು ತಿಳಿಸಿದೆ.