ಬಾಲಿವುಡ್ ಹಾಸ್ಯನಟ ಕಪಿಲ್ ಶರ್ಮಾಗೆ ಕಾನೂನು ಸಂಕಷ್ಟ ಬೆಂಗಳೂರು, ಜುಲೈ 05, 2022 (..): ಉತ್ತರ ಅಮೆರಿಕ ಪ್ರವಾಸದ ಒಪ್ಪಂದವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಪಿಲ್ ಶರ್ಮಾ ಮತ್ತೊಮ್ಮೆ ಕಾನೂನು ಸಮಸ್ಯೆಗೆ ಸಿಲುಕಿದ್ದಾರೆ. ಹೌದು. ಬಾಲಿವುಡ್‌ನ ಖ್ಯಾತ ಹಾಸ್ಯನಟ ಕಿರುತೆರೆ ಸ್ಟಾರ್ ಕಪಿಲ್ ಶರ್ಮಾ ಮತ್ತೆ ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ. ಕಂಪನಿಯೊಂದು ಕಪಿಲ್ ಶರ್ಮಾ ವಿರುದ್ಧ ಒಪ್ಪಂದದ ಉಲ್ಲಂಘನೆಗಾಗಿ ಮೊಕದ್ದಮೆ ಹೂಡಿದೆ. ಹೀಗಾಗಿ ಅವರಿಗೆ ಸಂಕಷ್ಟ ಎದುರಾಗಿದೆ. ಒಪ್ಪಂದದ ಪ್ರಕಾರ ಕಪಿಲ್ ಶರ್ಮಾ ಆರು ಶೋ ಮಾಡುವುದಾಗಿ ಸಂಭಾವನೆ ಪಡೆದಿದ್ದರು. ಆದರೆ ಅವರು ಕೇವಲ ಐದು ಪ್ರದರ್ಶನಗಳನ್ನು ಮಾತ್ರ ನೀಡಿದ್ದಾರೆ. ನಷ್ಟವನ್ನು ಭರಿಸುವುದಾಗಿ ಕಪಿಲ್ ಭರವಸೆ ನೀಡಿದ್ದರು. ಆದರೆ ಇದುವರೆಗೂ ನಷ್ಟ ಭರಿಸಿಲ್ಲ ಎಂದು ಕಾರ್ಯಕ್ರಮ ಆಯೋಜಕರು ಆರೋಪಿಸಿದ್ದಾರೆ.