ವರ್ಷ ಎಂಟು, ಸುಳ್ಳಿನ ಅವಾಂತರ ನೂರೆಂಟು: ಮೋದಿ ಯಾವುದೇ ಭರವಸೆ ಈಡೇರಿಸಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ. ಬೆಂಗಳೂರು,ಜುಲೈ,2,2022(..):ಪ್ರಧಾನಿ ಮೋದಿ ಅವರು 8 ವರ್ಷದ ಸಾಧನೆ ಬಗ್ಗೆ ಜಾಹೀರಾತು ಕೊಡ್ತಿದ್ದಾರೆ. ಆದರೆ ಮೋದಿ ಜನರಿಗೆ ನೀಡಿದ್ದ ಯಾವುದೇ ಭರವಸೆಗಳನ್ನ ಈಡೇರಿಸಿಲ್ಲ. ಯಾವ ಕಾರಣಕ್ಕಾಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು. ಇದೇ ವೇಳೆ ವರ್ಷ 8, ಅವಾಂತರ 108, ಸುಳ್ಳಿನ ಸಂಭ್ರಮ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿ 12 ವರ್ಷ, ಪ್ರಧಾನಿಯಾಗಿ 8 ವರ್ಷ ಒಟ್ಟು 20 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಪ್ರಧಾನಿಯಾಗುವ ಮುನ್ನ ಹಲವು ಭರವಸೆಗಳನ್ನ ನೀಡಿದ್ದರು. ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಮೋದಿ ಪ್ರಧಾನಿಯಾದ ನಂತರ ಯಾವುದೇ ಭರವಸೆ ಈಡೇರಿಸಲಿಲ್ಲ ಎಂದು ಕುಟುಕಿದರು. 2014ರ ಲೋಕಸಭಾ ಚುನಾವಣೆ ವೇಳೆ 83.4 ಕೋಟಿ ಮತದಾರರಿದ್ದರು. 17 ಕೋಟಿ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ದೇಶದ ಜನರ ಗಮನ ಬೇರೆಡೆ ಸೆಳೆಯುವಲ್ಲಿ ಯಶಸ್ವಿಯಾದರು. ಕಪ್ಪು ಹಣ, ನಿರುದ್ಯೋಗ, ಬೆಲೆ ಏರಿಕೆ ವಿಚಾರ ಡೈವರ್ಟ್ ಮಾಡಿದರು. ಪುಲ್ವಾಮಾ, ಬಾಲಾಕೋಟ್​ ದಾಳಿ ವಿಚಾರ ಮುಂದಿಟ್ಟರು.​ 2019ರಲ್ಲಿ ಲೋಕಸಭಾ ಚುನಾವಣೆ ವೇಳೆ 94 ಕೋಟಿ ಮತದಾರರಿದ್ದರು. 22.09 ಕೋಟಿ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ಮತ್ತೆ ಅಧಿಕಾರಕ್ಕೆ ಬಂದಾಗಲೂ ಜನಸಾಮಾನ್ಯರ ಕೆಲಸ ಮಾಡಲಿಲ್ಲ. ಪುಲ್ವಾಮಾ ದಾಳಿ ಮುಂದಿಟ್ಟುಕೊಂಡು ಗೆದ್ದರು ಎಂದು ಸಿದ್ಧರಾಮಯ್ಯ ಕಿಡಿಕಾರಿದರು. ರಾಜ್ಯಕ್ಕೆ 1,29,766 ಕೋಟಿ ನೀಡಿರುವುದಾಗಿ ಜಾಹೀರಾತು ಕೊಟ್ಟಿದ್ದಾರೆ. ರಾಜ್ಯದಿಂದ ಸಂಗ್ರಹವಾಗಿರುವ ತೆರಿಗೆ 19 ಲಕ್ಷ ಕೋಟಿ ರೂಪಾಯಿ. 19 ಲಕ್ಷ ಕೋಟಿ ತೆರಿಗೆ ಕಟ್ಟಿರುವ ರಾಜ್ಯಕ್ಕೆ ಇವರು ಭಿಕ್ಷೆ ನೀಡಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಅನ್ಯಾಯದ ಬಗ್ಗೆ ಚಕಾರವೆತ್ತಲಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಮಾತಾಡಲಿಲ್ಲ. ನೋಟ್​ ಬ್ಯಾನ್​ನಿಂದ ಭಯೋತ್ಪಾದನೆ, ಕಪ್ಪು ಹಣ ನಿಯಂತ್ರಿಸುತ್ತೇವೆ. ರಾತ್ರೋರಾತ್ರಿ ನೋಟ್​ಬ್ಯಾನ್​ ಮಾಡಿ ಉದ್ದುದ್ದ ಭಾಷಣ ಮಾಡಿದರು ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು. : - - - – - - . … .: ’ – , 2, 2022 (..): “ 8 . . ,” . , “ 8, 108,” (8 , 108 ) . “ 12 , 8 . 20 . . . 2 , ,” .“ 83.4 2014 . 17 . , , , . , . 2019 94 22.09 . ’ . ,” . , .1,29,766 . . 19 . ? 25 ’ , ’ ,” .: / / / 8