ತಮ್ಮ ಬಗ್ಗೆ ನಾಲಿಗೆ ಹರಿಬಿಟ್ಟ ಕೆ.ಎನ್ ರಾಜಣ್ಣಗೆ ತಿರುಗೇಟು ನೀಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು. ಬೆಂಗಳೂರು,ಜುಲೈ,1,2022(..):ತಮ್ಮ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನ ನೀಡುವ ಮೂಲಕ ನಾಲಿಗೆ ಹರಿಬಿಟ್ಟಿದ್ಧ ಮಾಜಿ ಶಾಸಕ ಕೆ.ಎನ್ ರಾಜಣ್ಣಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಹೆಚ್.ಡಿ ದೇವೇಗೌಡರು, ಗೌಡರಿಗೆ ಕೂರಲು ನಿಲ್ಲಲು ಆಗಲ್ಲ ಎಂದು ಅಪಹಾಸ್ಯ ಮಾಡುತ್ತಾರೆ ಆದರೆ ನಾವು ಎದೆಗುಂದದೇ ಎದುರಾಳಿಗಳ ವಿರುದ್ಧ ಹೋರಾಡುತ್ತೇವೆ. ನಮ್ಮ ಹೋರಾಟದ ಬದುಕಿನಲ್ಲಿ ಶಕ್ತಿ ಇದೆ ಎಂದಿದ್ದಾರೆ. ಮಧುಗಿರಿ ತಾಲೂಕಿನ ಕಾವಣದಾಲ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೆ.ಎನ್​.ರಾಜಣ್ಣ, ‘ದೇವೇಗೌಡರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೇ. ನಾಲ್ವರು ಹೊತ್ಕೊಂಡ್ ಹೋಗೋದು ಹತ್ತಿರದಲ್ಲೇ ಇದೆ. ಎಂದು ಹೇಳಿಕೆ ನೀಡಿದ್ದರು. : - -