ನಟ ಗಣೇಶ್ ಹುಟ್ಟುಹಬ್ಬಕ್ಕೆ ಗಾಳಿಪಟ-2 ಸಾಂಗ್ ಗಿಫ್ಟ್! ಬೆಂಗಳೂರು, ಜುಲೈ 01, 2022 (..):ನಟ ಗಣೇಶ್ ಹುಟ್ಟುಹಬ್ಬದ ಅಂಗವಾಗಿ “ಗಾಳಿಪಟ ೨” ಚಿತ್ರತಂಡ ಹಾಡು ಇದೇ ಜುಲೈ 2 ಬಿಡುಗಡೆಯಾಗಲಿದೆ. ಜಯಂತ ಕಾಯ್ಕಿಣಿ ಅವರು ಬರೆದಿರುವ “ನಾನಾಡದ ಮಾತೆಲ್ಲವ ಕದ್ದಾಲಿಸು” ಎಂಬ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ . ಅಂದಹಾಗೆ “ಗಾಳಿಪಟ” ಮೊದಲ ಭಾಗದ “ಮಿಂಚಾಗಿ ನೀನು ಬರಲು” ಹಾಡು ಕೂಡ ಜಯಂತ ಕಾಯ್ಕಿಣಿ, ಸೋನು ನಿಗಮ್, ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಶನ್ ನಲ್ಲಿ ಮೂಡಿ ಬಂದಿತ್ತು. ಜುಲೈ 2 ರಂದು ಆನಂದ್ ಆಡಿಯೋ ಮೂಲಕ ಈ ಹಾಡು ಎಲ್ಲರಿಗೂ ತಲುಪಲಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದ್ದಾರೆ. ಹಾಡು ಬರೆದಿರುವ ಜಯಂತ ಕಾಯ್ಕಿಣಿ ಕಾಯ್ಕಿಣಿ, ಹಾಡಿರುವ ಸೋನು ನಿಗಂ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಯೋಗರಾಜ್ ಭಟ್ ಧನ್ಯವಾದ ಹೇಳಿದ್ದಾರೆ.