ದೇಶದ ಜನರ ಎದುರು ಕ್ಷಮೆಯಾಚಿಸಿ: ನೂಪುರ ಶರ್ಮಾಗೆ ಸುಪ್ರೀಂಕೋರ್ಟ್ ತರಾಟೆ. ನವದೆಹಲಿ,ಜುಲೈ,1,2022(..):ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನೂಪುರ್ ಶರ್ಮಾ ಅವರಿಗೆ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್, ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ನೂಪುರ ಶರ್ಮಾ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆಯಾಗಿದೆ. ಲೂಸ್ ಟಾಕ್ ನಿಂದ ದೇಶಕ್ಕೆ ಬೆಂಕಿ ಬಿತ್ತು. ನೀವು ಭಾವನೆಗಳಿಗೆ ಕಿಡಿ ಹೊತ್ತಿಸಿದ್ದೀರಿ. ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ನೀವೇ ಕಾರಣ ಎಂದು ಕ್ಲಾಸ್ ತೆಗೆದುಕೊಂಡಿದೆ. ನೂಪುರ್ ಶರ್ಮಾ ಹೇಳಿಕೆಯಿಂದಲೇ ಉದಯಪುರದಲ್ಲಿ ಘಟನೆ ನಡೆಯಿತು. ಬೇಜವಾಬ್ದಾರಿ ಹೇಳಿಕೆಯೇ ಘಟನೆಗೆ ಕಾರಣ. ಹೇಳಿಕೆ ಹಿಂಪಡೆಯುವುದು ಲೇಟಾಯಿತು. ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. … , 1, 2022 (..): ’ , ’ . , ’ ’ . . . ’ . . , .: / / / : – – - – .