: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಂಡಿಸಿದ ಮಧ್ಯಂತರ ವರದಿ ಯಥಾವತ್ ಅಂಗೀಕಾರ. ಚಂಡಿಗಢ, ಜೂ.28, 2022 : (.. )ಇಂದು ನಡೆದ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಸಚಿವರ ಸಮಿತಿ ತೆರಿಗೆ ದರಗಳಲ್ಲಿನ ಪರಾಮರ್ಶೆಗೆ ಸಂಬಂಧಿಸಿದಂತೆ ಮಂಡಿಸಿದ ಮಧ್ಯಂತರ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಲಾಯಿತು. ಲಖನೌದಲ್ಲಿ ನಡೆದ ನಲವತ್ತೈದನೆಯ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ, ಜಿ.ಎಸ್.ಟಿ. ದರಗಳಲ್ಲಿ ಪರಾಮರ್ಶೆ, ಕೆಳಮುಖ ತೆರಿಗೆ ರಚನೆಗಳಲ್ಲಿ ತಿದ್ದುಪಡಿ ಹಾಗೂ ತೆರಿಗೆ ವಿನಾಯಿತಿ ಕಡಿಮೆ ಮಾಡುವ ಪ್ರಕ್ರಿಯೆಗಳನ್ನು ಪರಿಶೀಲಿಸಲು ಸಚಿವರ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಸದರಿ ಸಮಿತಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದ್ಯಕ್ಷರಾಗಿದ್ದು, ಪಶ್ಚಿಮ ಬಂಗಾಳ, ಬಿಹಾರ, ಕೇರಳ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಗೋವಾ ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಇಂದು ಚಂಡಿಗಡದಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ ನ ಸಭೆಯಲ್ಲಿ ಸಚಿವರ ಸಮಿತಿಯು ತೆರಿಗೆ ದರಗಳಲ್ಲಿನ ಪರಾಮರ್ಶೆಗೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನು ಸಲ್ಲಿಸಿತು. ಕೆಳಮುಖ ತೆರಿಗೆ ರಚನೆಯಲ್ಲಿ ತಿದ್ದುಪಡಿ ಮತ್ತು ತೆರಿಗೆ ವಿನಾಯಿತಿಗಳನ್ನು ಕಡಿಮೆ ಮಾಡುವಂತಹ ಎರಡು ಒತ್ತಾಯದ ಶಿಫಾರಸ್ಸುಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ, ಜಿ.ಎಸ್.ಟಿ. ಕೌನ್ಸಿಲ್ ಮುಂದೆ ಮಂಡಿಸಿದರು. ಸಚಿವರ ಸಮಿತಿಯು ತನ್ನ ವರದಿಯಲ್ಲಿ ಮಂಡಿಸಿರುವ ವಿವರವಾದ ವಿಶ್ಲೇಷಣೆಯ ಕುರಿತು, ಕೌನ್ಸಿಲ್ ನ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು. ಸಮಿತಿಯ ಸಂಚಾಲಕರ ಪರಿಶ್ರಮವನ್ನು ಶ್ಲಾಘಿಸುತ್ತಾ ಅದರಲ್ಲಿನ ಅಂಶವಾರು ವಿವರಗಳನ್ನು ಚರ್ಚಿಸದೆ, ವರದಿಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಬೇಕೆಂದು ದೆಹಲಿಯ ಸದಸ್ಯ ಮನೀಷ ಸಿಸೋಡಿಯಾ ಶಿಫಾರಸ್ಸು ಮಾಡಿದರು. ಸಮತೋಲನದ ದೃಷ್ಟಿಕೋನವನ್ನು ಪ್ರದರ್ಶಿಸುತ್ತ, ಗ್ರಾಹಕರ ಸೂಕ್ಷ್ಮತೆಗಳಿಗೆ ಸಂವೇದಿಸುವ ವರದಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳ ನೇತೃತ್ವದ ಸಚಿವರ ಸಮಿತಿಯು ಹೊರತಂದಿರುತ್ತದೆ ಎಂದು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಸದಸ್ಯರು ತಿಳಿಸಿದರು. ಒಂದು ತೀರಾ ಅಪರೂಪದ ನಡೆಯಲ್ಲಿ, ಪ್ರತ್ಯೇಕ ಅಂಶಗಳನ್ನು ಚರ್ಚಿಸದೆ, ಸಚಿವರ ಸಮಿತಿಯು ವರದಿಯನ್ನು ಸಂಪೂರ್ಣವಾಗಿ ಜಿ.ಎಸ್.ಟಿ. ಕೌನ್ಸಿಲ್ ಸರ್ವಾನುಮತದಿಂದ ಅಂಗೀಕರಿಸಿತು. ವರದಿಯ ಸಿದ್ಧಪಡಿಸುವಿಕೆಯಲ್ಲಿ ಮುಖ್ಯವಾದ ಮತ್ತು ಪ್ರಸ್ತುತವಾದ ಅಂಶಗಳನ್ನು ಒದಗಿಸಿದ್ದಕ್ಕಾಗಿ ಎಲ್ಲ ರಾಜ್ಯಗಳ ಸದಸ್ಯರುಗಳಿಗೆ, ಕರ್ನಾಟಕದ ಮುಖ್ಯಮಂತ್ರಿಗಳು ಕೃತಜ್ಞತೆಯನ್ನು ಸಲ್ಲಿಸಿದರು. : --- : 45th 17.09.2021 () . ’ , , , , . . . . . . , . .