ಚಾರ್ಲಿ 777 ಡಬ್ಬಿಂಗ್ ರೈಟ್ಸ್’ಗೂ ಫುಲ್ ಡಿಮ್ಯಾಂಡ್ ಬೆಂಗಳೂರು, ಜೂನ್ 29, 2022 (..):ನಟ ರಕ್ಷಿತ್ ಶೆಟ್ಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಚಾರ್ಲಿ 777 ಡಬ್ಬಿಂಗ್ ಗೂ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿದೆ. ಕನ್ನಡ ಸೇರಿದಂತೆ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ಕೂಡ ಸಿನಿಮಾ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಸಿನಿಮಾಗೆ ಉತ್ತಮ ಪ್ರಶಂಸೆ ಸಿಕ್ಕಿದೆ. ಆದರೂ ಡಬ್ಬಿಂಗ್ ಗೂ ಡಿಮ್ಯಾಂಡ್ ಸೃಷ್ಟಿಯಾಗಿದೆ. ಚಾರ್ಲಿ ರಿಮೇಕ್ ಹಕ್ಕು ಪಡೆಯಲು ಮಾತುಕತೆ ಶುರುವಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ. ಚಾರ್ಲಿ ಪ್ರೇಕ್ಷಕರನ್ನು ಭಾವನಾತ್ಮಕನಾಗಿ ಸೆಳೆದಿದೆ. ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದೆ. ಆದರೂ ಕೂಡ ಈ ಸಿನಿಮಾದ ರಿಮೇಕ್ ಹಕ್ಕಿಗೆ ಬೇಡಿಕೆ ಬಂದಿದೆಯಂತೆ. ಚಾರ್ಲಿ ಸಿನಿಮಾ 17 ದಿನಗಳನ್ನೂ ಪೂರೈಸಿದೆ. ಬಾಕ್ಸಾಫೀಸ್‌ನಲ್ಲೂ ಕೂಡ ಮೊದಲ ದಿನದಿಂದ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ. ಜತೆಗೆ ರಕ್ಷಿತ್ ಶೆಟ್ಟಿಯ ಕೆರಿಯರ್‌ನಲ್ಲಿ ಅತಿ ಹೆಚ್ಚು ಗ್ರಾಸ್ ಕಂಡ ಸಿನಿಮಾ ಇದು.